ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಕ್ರಮ ಗಣಿ: ಲೋಕಾಯುಕ್ತ ವರದಿ ಪಡೆದ ಸಿಬಿಐ (CBI | Lokayuktha | BJP | Karnataka | Yeddyurappa | UPA)
Bookmark and Share Feedback Print
 
ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ಈಗಾಗಲೇ ಲೋಕಾಯುಕ್ತರ ವರದಿಯನ್ನು ಪಡೆದಿದ್ದು, ತನಿಖೆಗೆ ಸಂಪೂರ್ಣ ಸಹಕಾರ ಮತ್ತು ಲಭ್ಯವಿರುವ ಎಲ್ಲಾ ದಾಖಲೆಗಳನ್ನು ಒದಗಿಸಲು ಲೋಕಾಯುಕ್ತ ನಿರ್ಧರಿಸಿರುವುದಾಗಿ ಮೂಲವೊಂದು ತಿಳಿಸಿದೆ.

ಲೋಕಾಯುಕ್ತರು ಈಗಾಗಲೇ ಅಕ್ರಮ ಗಣಿಗಾರಿಕೆಯ ವರದಿಯನ್ನು ರಾಜ್ಯ ಸರ್ಕಾರಕ್ಕೆ ಒಪ್ಪಿಸಿತ್ತು. ಆ ನಿಟ್ಟಿನಲ್ಲಿ ಸಿಬಿಐ ಆ ವರದಿಯನ್ನು ಪಡೆದುಕೊಂಡಿದೆ. ಸಿಬಿಐಗೆ ಹೆಚ್ಚು ಮಾಹಿತಿ ಬೇಕಾದಲ್ಲಿ ನಾವು ಸಹಕರಿಸುತ್ತೇವೆ ಎಂದು ಲೋಕಾಯುಕ್ತರು ಹೇಳಿದ್ದಾರೆ.

ಲೋಕಾಯುಕ್ತರ ವರದಿ ಸಿಬಿಐನ ತನಿಖೆಯನ್ನು ಬಹಳ ಸುಲಭವಾಗಿಸುತ್ತದೆ. ತಮ್ಮ1800 ಪುಟಗಳ ವರದಿಯಲ್ಲಿ ಅಕ್ರಮ ಗಣಿಗಾರಿಕೆಯ ವಿವರಗಳನ್ನು ಸಂಪೂರ್ಣವಾಗಿ ಕಲೆ ಹಾಕಿದ್ದಾರೆ. ಏತನ್ಮಧ್ಯೆ, ಬಳ್ಳಾರಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಸಂಸತ್‌ನಲ್ಲಿ ಸಂಸದರು ತನಿಖೆಗೆ ಒತ್ತಾಯಿಸಿರುವ ಹಿನ್ನೆಲೆಯಲ್ಲಿ, ಕಾರ್ಯಪಡೆಯೊಂದನ್ನು ಕರ್ನಾಟಕಕ್ಕೆ ಕಳುಹಿಸಲು ಕೇಂದ್ರ ಸೂಚನೆ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ