ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ದಿನಕರನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ: ಪುಟ್ಟೇಗೌಡ (Dinakaran | High court | Supreme court | Karnataka | CJ)
Bookmark and Share Feedback Print
 
ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ನ್ಯಾಯಾಲಯದ ಕಲಾಪದಲ್ಲಿ ಪಾಲ್ಗೊಳ್ಳುವುದನ್ನು ನಗರದ ವಕೀಲರ ಸಂಘ ಮತ್ತೆ ಆಕ್ಷೇಪ ವ್ಯಕ್ತಪಡಿಸಿದೆ.

ಸಿಜೆ ಬಗೆಗಿನ ಭೂ ಒತ್ತುವರಿ ಹಗರಣ ರುಜುವಾತಾಗಿದ್ದು, ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಲು ಅರ್ಹರಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ವರದಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಅವರೇ ತಮ್ಮ ಪದವಿಗೆ ರಾಜೀನಾಮೆ ನೀಡುತ್ತಾರೆಂಬ ವಿಶ್ವಾಸವನ್ನು ಸಂಘ ವ್ಯಕ್ತಪಡಿಸಿದೆ.

ಸಿಜೆ ಅವರನ್ನು ರಾಜೀನಾಮೆ ಕೇಳುವುದಾಗಲೀ ವಾಗ್ದಂಡನೆ ಮಾಡಲು ಲೋಕಸಭೆಗೆ ಶಿಫಾರಸು ಮಾಡುವುದನ್ನಾಗಲಿ ಸುಪ್ರಿಂ ಕೋರ್ಟಿನ ಹಿರಿಯ ನ್ಯಾಯಾಧೀಶರ ಸಮಿತಿಗೆ ಬಿಡಲಾಗಿದೆ. ಆದರೇ, ವಕೀಲರ ಕೋರಿಕೆ ಧಿಕ್ಕರಿಸಿ ಸಿಜೆ ನ್ಯಾಯಾಲಯದ ಕಲಾಪದಲ್ಲಿ ಮುಂದುವರಿದರೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ಕೆ.ಎನ್.ಪುಟ್ಟೇಗೌಡ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ