ಅಕ್ರಮ ಭೂ ಕಬಳಿಕೆ ಆರೋಪ ಎದುರಿಸುತ್ತಿರುವ ರಾಜ್ಯ ಹೈಕೋರ್ಟ್ ಮುಖ್ಯನ್ಯಾಯಾಧೀಶರಾದ ಪಿ.ಡಿ.ದಿನಕರನ್ ಅವರು ಸೋಮವಾರ ಕಲಾಪವನ್ನು ದಿಢೀರ್ ರದ್ದುಗೊಳಿಸಿದ ಘಟನೆ ನಡೆದಿದೆ.
ಬಿಬಿಎಂಪಿ ವಾರ್ಡ್ ಮೀಸಲು ಪಟ್ಟಿ ವಿವಾದ, ರೇಸ್‌ಕೋರ್ಸ್ ಸೇರಿದಂತೆ ಒಟ್ಟು 63 ಪ್ರಕರಣಗಳ ವಿಚಾರಣೆಯನ್ನು ಪಿ.ಡಿ.ದಿನಕರನ್ ನೇತೃತ್ವದ ವಿಭಾಗೀಯ ಪೀಠ ಕೈಗೆತ್ತಿಕೊಳ್ಳಬೇಕಿತ್ತು.
ಆದರೆ ಸೋಮವಾರ ಹೈಕೋರ್ಟ್ ವಿಭಾಗೀಯ ಪೀಠದ ಕಲಾಪವನ್ನು ದಿಢೀರ್ ರದ್ದುಗೊಳಿಸಿದ್ದಾರೆ. ಕಲಾಪ ರದ್ದುಗೊಳಿಸಲು ಕಾರಣ ಏನೆಂದು ತಿಳಿದು ಬಂದಿಲ್ಲ.
ಏತನ್ಮಧ್ಯೆ ಮುಖ್ಯನ್ಯಾಯಮೂರ್ತಿ ದಿನಕರನ್ ಅವರ ಬಡ್ತಿ ಭವಿಷ್ಯ ಕುರಿತು ಮಂಗಳವಾರ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ನೀಡಲು ಸುಪ್ರೀಂಕೋರ್ಟ್ ನ್ಯಾಯಾಧೀಶರ ಸಮಿತಿ ನೀಡಿದ್ದ ಶಿಫಾರಸ್ಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಿ ಕಡತವನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಬಾಲಕೃಷ್ಣನ್ ಅವರಿಗೆ ವಾಪಸ್ ಕಳುಹಿಸಿತ್ತು.