ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮೇಲ್ಮನೆ ಚುನಾವಣಾ ಕಣದಲ್ಲಿ 25ವರ್ಷದ ಅಭ್ಯರ್ಥಿ! (BJP | Congress | Yeddyurappa | Karnataka | Vidhana parishath)
Bookmark and Share Feedback Print
 
ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗೆ ಕನಿಷ್ಠ 30 ವರ್ಷ ವಯಸ್ಸಾಗಿರಬೇಕು ಎಂಬುದು ನಿಯಮ. ಆದರೆ, ವಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಕ್ಷೇತ್ರದಲ್ಲಿ 25 ವರ್ಷದ ಅಭ್ಯರ್ಥಿಯೊಬ್ಬರು ಕಣದಲ್ಲೇ ಉಳಿದಿದ್ದಾರೆ.

ಚುನಾವಣಾಧಿಕಾರಿಗಳ ಕರ್ತವ್ಯಲೋಪದಿಂದ ಈ ಅಚಾತುರ್ಯ ನಡೆದಿದೆ. ಕಣದಲ್ಲಿರುವ 11 ಅಭ್ಯರ್ಥಿಗಳ ಪೈಕಿ ಪಕ್ಷೇತರ ಅಭ್ಯರ್ಥಿ ಅಜೇಯಕುಮಾರ ಮಲ್ಲನಗೌಡ ಪಾಟೀಲ ಅವರಿಗೆ 25ರ ಪ್ರಾಯ. 16-06-1984 ರಂದು ಜನಿಸಿರುವ ಅವರು ಎಂಬಿಎ ಪದವೀಧರ. ಬಸವನ ಬಾಗೇವಾಡಿ ತಾಲೂಕು ಹಣಮಾಪುರ ಗ್ರಾಮ ಪಂಚಾಯ್ತಿ ಸದಸ್ಯ. ಅಜೇಯ್ ಕುಮಾರ್ ತನಗೆ 25 ವರ್ಷ ಪೂರ್ಣಗೊಂಡಿದೆ ಎಂದೇ ನಾಮಪತ್ರದಲ್ಲಿ ನಮೂದಿಸಿದ್ದಾರೆ.

ನಾಮಪತ್ರ ಪರಿಶೀಲನೆ ವೇಳೆ ಲೋಪವಾಗಿರುವುದನ್ನು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಆರ್.ಶಾಂತರಾಜ್ ಒಪ್ಪಿಕೊಂಡಿದ್ದಾರೆ. ಇದನ್ನು ಚುನಾವಣಾ ಆಯುಕ್ತರ ಗಮನಕ್ಕೆ ತಂದಿದ್ದು ಅವರ ನಿರ್ದೇಶನದಂತೆ ನಡೆದುಕೊಳ್ಳಲಾಗುವುದು ಎಂದಿದ್ದಾರೆ. ಚುನಾವಣಾ ಆಯೋಗದ ನಿರ್ಧಾರಕ್ಕೆ ನಾನು ಬದ್ಧ ಎಂದು ಅಜೇಯ್ ಕುಮಾರ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ