ರೆಡ್ಡಿ ಸಹೋದರರಿಂದ ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸಚಿವಾಲಯದ ನಾಲ್ವರು ಅಧಿಕಾರಿಗಳ ಕಾರ್ಯಪಡೆ ಸೋಮವಾರ ಹೊಸಪೇಟೆ ಮತ್ತು ಸಂಡೂರು ತಾಲೂಕಿನ ವಿವಿಧ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕೇಂದ್ರ ಗಣಿ ಸಚಿವಾಲಯದ ನಾಲ್ವರು ಅಧಿಕಾರಿಗಳ ಪೈಕಿ ತಲಾ ಇಬ್ಬರು ಸ್ಥಳೀಯ ಅಧಿಕಾರಿಗಳ ಜತೆಗೂಡಿ, ಹೊಸಪೇಟೆ ಮತ್ತು ಸಂಡೂರಿನ ವಿವಿಧ ಗಣಿಗಾರಿಕೆ ಪ್ರದೇಶಗಳಲ್ಲಿನ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು.
ಭಾರತೀಯ ಗಣಿ ನಿರ್ದೇಶನಾಲಯದ ದಕ್ಷಿಣ ಪ್ರಾದೇಶಿಕ ಉಪ ನಿಯಂತ್ರಕ ಎಂ.ಎಸ್.ವಾಗ್ಮರೆ, ಉಪ ನಿಯಂತ್ರಕ ಬಿ.ಎಲ್.ಪೋಕ್ರಿವಾಲಾ, ಗೋವಾ ಪ್ರಾದೇಶಿಕ ನಿಯಂತ್ರಕ ಎ.ಬಿ.ಪಾಣಿಗ್ರಹಿ ಹಾಗೂ ಹಿರಿಯ ಭೂ ವಿಜ್ಞಾನಿ ತಿರುವನಕ್ಕರಸು ತನಿಖಾ ತನಿಖಾ ತಂಡದಲ್ಲಿದ್ದು, ಈ ಪೈಕಿ ಇಬ್ಬರು ಅಧಿಕಾರಿಗಳು ಪ್ರತ್ಯೇಕವಾಗಿ ತನಿಖೆ ಮಾಡುತ್ತಿದ್ದಾರೆ.
ಒಂದು ತಂಡ ಸಂಡೂರಿಗೆ ಭೇಟಿ ನೀಡಿದ್ದರೆ, ಮತ್ತೊಂದು ತಂಡ ಹೊಸಪೇಟೆಯ ಆರ್‌ಪಿಸಿ ಗಣಿಗಾರಿಕೆ ಪ್ರದೇಶಕ್ಕೆ ತೆರಳಿ ಪರಿಶೀಲಿಸುತ್ತಿದೆ.