ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುತ್ತಿಲ್ಲ: ಸಿಎಂ (Yeddyurappa | BJP | JDS | Bangalore | Karnataka)
Bookmark and Share Feedback Print
 
ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ಹಣಕಾಸು ಇಲಾಖೆ ಅಧಿಕಾರಿಗಳ ಸಭೆ ನಂತರ ಅವರು ಸುದ್ದಿಗಾರರ ಜೊತೆ ಮತನಾಡಿ, ಆರ್ಥಿಕ ಹಿಂಜರಿತದ ಬಿಸಿ ಇಡೀ ವಿಶ್ವಕ್ಕೆ ತಟ್ಟಿದೆ. ಇದರಿಂದ ರಾಜ್ಯದಲ್ಲೂ ತೆರಿಗೆ ಸಂಗ್ರಹ ಇಳಿಮುಖ ಆಗಿದ್ದು, ಈ ಆರ್ಥಿಕ ವರ್ಷದೊಳಗೆ ಉದ್ದೇಶಿತ ತೆರಿಗೆ ಸಂಗ್ರಹಕ್ಕೆ ಒತ್ತು ನೀಡುವುದಾಗಿ ಅವರು ವಿವರಿಸಿದ್ದಾರೆ.

ತೆರಿಗೆ ಸಂಗ್ರಹ ಕಡಿಮೆ ಆಗಿದ್ದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಯೋಜನಾ ವೆಚ್ಚ ಶೇ. 40 ಹೆಚ್ಚಿಗೆ ಆಗಿದೆ. ಯೋಜನೇತರ ವೆಚ್ಚದಲ್ಲಿ ಶೇ. 12ರಷ್ಟು ಏರಿಕೆ ಆಗಿದೆ ಎಂದು ಹಣಕಾಸು ಖಾತೆಯನ್ನೂ ಹೊಂದಿರುವ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ತೆರಿಗೆ ಸಂಗ್ರಹದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಪಾಲು ಸಮರ್ಪಕವಾಗಿ ದೊರಕಿಲ್ಲ ಎಂದೂ ಅವರು ದೂರಿದರು.
ಸಂಬಂಧಿತ ಮಾಹಿತಿ ಹುಡುಕಿ