ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮೀಸಲಾತಿ ಪಟ್ಟಿ ಸರಿಪಡಿಸಿ-ಚುನಾವಣೆ ನಡೆಸಿ: ಹೈಕೋರ್ಟ್ (High court | BBMP | BJP | Yeddyurappa | Election)
Bookmark and Share Feedback Print
 
NRB
ಬಿಬಿಎಂಪಿ ಚುನಾವಣೆಗೂ ಮುನ್ನ ಸಂವಿಧಾನಬದ್ಧವಾಗಿ ವಾರ್ಡ್‌ಗಳ ಮೀಸಲಾತಿ ಮಾಡುವಂತೆ ಮಂಗಳವಾರ ಹೈಕೋರ್ಟ್ ವಿಭಾಗೀಯ ಪೀಠ ಸರ್ಕಾರಕ್ಕೆ ಸಲಹೆ ನೀಡಿದೆ.

ಬಿಬಿಎಂಪಿ ವಾರ್ಡ್‌ಗಳ ಮೀಸಲಾತಿ ವಿವಾದದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಪಿ.ಡಿ.ದಿನಕರನ್ ನೇತೃತ್ವದ ವಿಭಾಗೀಯ ಪೀಠ, ಸಂವಿಧಾನದ ವಿಧಿ 242ಟಿ ಪ್ರಕಾರ ವಾರ್ಡ್‌ ಮೀಸಲಾತಿ ಮಾಡುವಂತೆ ಸೂಚಿಸಿತು.

ಅಲ್ಲದೆ, ನಿಗದಿತ ವೇಳಾಪಟ್ಟಿಯಂತೆ ಚುನಾವಣೆಯನ್ನು ನಡೆಸಲು ಹೇಳಿದ ಹೈಕೋರ್ಟ್ ಪೀಠ, 2ವಾರದೊಳಗೆ ಮೀಸಲಾತಿ ಪಟ್ಟಿಯನ್ನು ಸರಿಪಡಿಸಿ ಬಿಡುಗಡೆಗೊಳಿಸುವಂತೆ ಸೂಚಿಸಿದೆ.

ಸಂವಿಧಾನಬದ್ಧವಾಗಿ ವಾರ್ಡ್ ಮೀಸಲಾತಿ ನಿಗದಿಪಡಿಸುವಂತೆ ಸೂಚಿಸಿದ ಹೈಕೋರ್ಟ್ ಸಲಹೆಯನ್ನು ಒಪ್ಪಿರುವುದಾಗಿ ಕೋರ್ಟ್‌ಗೆ ರಾಜ್ಯ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕೆ.ಎಂ.ನಟರಾಜ್, ಶೀಘ್ರವೇ ವಾರ್ಡ್ ಮೀಸಲಾತಿ ಪಟ್ಟಿಯನ್ನು ಸರಿಪಡಿಸಿ ಬಿಡುಗಡೆ ಮಾಡುವುದಾಗಿ ಹೇಳಿದರು.

ಬಿಬಿಎಂಪಿ ವಾರ್ಡ್ ಮೀಸಲಾತಿ ವಿವಾದ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರುವ ನಡುವೆಯೇ ಸೋಮವಾರ ರಾಜ್ಯ ಚುನಾವಣಾಧಿಕಾರಿ ಬಿಬಿಎಂಪಿ ಚುನಾವಣಾ ದಿನಾಂಕವನ್ನು ಘೋಷಿಸಿದ್ದರು. ಆದರೆ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವಾಗಲೇ ದಿನಾಂಕ ಘೋಷಣೆ ಹೇಗೆ ಮಾಡಿದ್ದೀರಿ ಎಂದು ಹೈಕೋರ್ಟ್ ನಿನ್ನೆ ಸಂಜೆ ನಡೆದ ವಿಚಾರಣೆ ವೇಳೆ ಪ್ರಶ್ನಿಸಿತ್ತು. ಕೂಡಲೇ ನಾವು ಚುನಾವಣಾ ದಿನಾಂಕ ಅಧಿಕೃತವಾಗಿ ಘೋಷಿಸಿಲ್ಲ ಎಂದು ಸ್ಪಷ್ಟನೆ ನೀಡಿ, ಕಾನೂನು ಉಲ್ಲಂಘನೆ ಆರೋಪದಿಂದ ನುಣುಚಿಕೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ