ರಾಜ್ಯಕ್ಕೆ ಮತ್ತಷ್ಟು ರೈಲ್ವೆ ಸಂಪರ್ಕ ನೀಡಿ: ಸಿಎಂ ಬೇಡಿಕೆ
ಬೆಂಗಳೂರು, ಮಂಗಳವಾರ, 8 ಡಿಸೆಂಬರ್ 2009( 19:17 IST )
ರಾಜ್ಯದಲ್ಲಿ ಶೇಕಡಾ 40ರಷ್ಟು ಪ್ರದೇಶ ರೈಲ್ವೆ ಸಂಪರ್ಕ ಹೊಂದಿಲ್ಲ . ಇದರ ಆದ್ಯತೆ ಮೇರೆಗೆ ಹೊಸ ಯೋಜನೆಯನ್ನು ರಾಜ್ಯಕ್ಕೆ ಕಲ್ಪಿಸಿಕೊಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿಯನ್ನು ಒತ್ತಾಯಿಸಿದ್ದಾರೆ.
ನಗರದ ರೈಲ್ವೆ ನಿಲ್ದಾಣದಲ್ಲಿ ವಿವಿಧ ರೈಲು ಮಾರ್ಗಗಳಿಗೆ ಹಸಿರು ನಿಶಾನೆ ತೋರಿಸುವ ಕಾರ್ಯಕ್ರಮಕ್ಕೂ ಮುನ್ನ ಸಿ.ಎಂ ಮಮತಾ ಬ್ಯಾನರ್ಜಿಯೊಂದಿಗೆ ಮಾತುಕತೆ ನಡೆಸಿ ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ಬ್ಯಾನರ್ಜಿ ಕೂಡ ರಾಜ್ಯದ ರೈಲ್ವೇ ಯೋಜನೆಗಳನ್ನು ತ್ವರಿತಗತಿಯಲ್ಲಿ ಜಾರಿಗೆ ತರುವ ಸಂಬಂಧ ಭರವಸೆಯನ್ನು ಈ ಸಂದರ್ಭದಲ್ಲಿ ನೀಡಿದರು. ಇದೇ ಸಂದರ್ಭದಲ್ಲಿ ಬ್ಯಾನರ್ಜಿ ಬೆಂಗಳೂರು-ಶಿವಮೊಗ್ಗ ಇಂಟರ್ ಸಿಟಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು.