ಇನ್ನು ಮುಂದೆ ಯಾವುದೇ ಕಾರಣಕ್ಕೂ ಅಕ್ರಮ ಬಡಾವಣೆ ನಿರ್ಮಿಸುವ ಬಿಲ್ಡರ್‌ಗಳಿಗೆ ರಕ್ಷಣೆ ನೀಡುವುದಿಲ್ಲ ಎಂದು ಸಾರಿಗೆ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಬಡಾವಣೆ ನಿರ್ಮಿಸುವ ಬಿಲ್ಡರ್ಸ್, ಅದಕ್ಕೆ ಸಹಕಾರ ನೀಡುವ ಸ್ಥಳೀಯ ಸಂಸ್ಥೆಗಳ ಎಂಜಿನಿಯರ್ ಮತ್ತು ಮುಖ್ಯಸ್ಥರ ಮೇಲೂ ಕಾನೂನುಕ್ರಮ ಜರುಗಿಸಲಾಗುವುದು. ಈ ಸಂಬಂಧ ಕಾಯಿದೆಗೆ ತಿದ್ದುಪಡಿ ತರಲಾಗುತ್ತದೆ ಎಂದರು.
ಈಗಾಗಲೇ ಅಕ್ರಮ ಬಡಾವಣೆಗಳನ್ನು ನಿರ್ಮಾಣ ಮಾಡಿರುವ ಬಹುತೇಕ ಬಿಲ್ಡರ್‌ಗಳು ಕಾನೂನಿನ ಚೌಕಟ್ಟಿನಿಂದ ನುಣುಚಿಕೊಂಡಿದ್ದಾರೆ. ದಾಖಲೆಗಳಲ್ಲಿಯೂ ಬಿಲ್ಡರ್‌ಗಳು ಸಿಕ್ಕಿಕೊಳ್ಳುವುದಿಲ್ಲ . ನೇರವಾಗಿ ಜಮೀನ್ದಾರರಿಂದ ನಿವೇಶನಗಳನ್ನು ನಿವೇಶನದಾರರಿಗೆ ವರ್ಗಾಯಿಸಿದ್ದಾರೆ. ಇಂತವರನ್ನು ಬಿಟ್ಟು , ಅಕ್ರಮ ನಿವೇಶನಗಳನ್ನು ಒಂದೇ ಬಾರಿಗೆ ಸಕ್ರಮಗೊಳಿಸಲಾಗುತ್ತಿದ್ದು, ಪಟ್ಟಣ ಪಂಚಾಯಿತಿಯಿಂದ ಮಹಾನಗರ ಪಾಲಿಕೆವರೆಗೆ ಈ ಸೌಲಭ್ಯ ಲಭ್ಯವಾಗಲಿದೆ ಎಂದು ಅಶೋಕ್ ಹೇಳಿದರು.