ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಪಟ್ಟವನ್ನು ಎಚ್.ಡಿ . ಕುಮಾರಸ್ವಾಮಿ ಅಲಂಕರಿಸಲಿದ್ದಾರೆ. ಇದನ್ನು ಖಂಡಿತ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಜೆಡಿಎಸ್ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಪಿ.ಜಿ.ಆರ್ ಸಿಂಧ್ಯ ಭವಿಷ್ಯ ನುಡಿದಿದ್ದಾರೆ.
ಅವರು ಹಾರೋಹಳ್ಳಿ ಗ್ರಾಮ ಪಂಚಾಯತ್ ಜೆಡಿಎಸ್ ಸದಸ್ಯರ ಸಭೆಯಲ್ಲಿ ಮಾತನಾಡಿ, ತಾವು ಜನತಾದಳಕ್ಕೆ ಎಷ್ಟು ನಿಷ್ಠೆಯಿಂದ ಇರುವೆನು ಎಂಬುದನ್ನು ತೋರ್ಪಡಿಸಿದರು.
ಉತ್ತಮ ಆಡಳಿತ ನಡೆಸಲು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಜೆಡಿಎಸ್ ಪಕ್ಷವನ್ನು ಬೆಳೆಸಿ ಪೋಷಿಸಬೇಕಾಗಿದೆ. ನೀವೇ ಗೌಡರ ಪಕ್ಷಕ್ಕೆ ಅಡಿಪಾಯ. ಪಕ್ಷದ ಪ್ರತಿಯೊಬ್ಬ ಸದಸ್ಯರು ಪಕ್ಷದ ಅಭ್ಯರ್ಥಿ ಪರ ತಮ್ಮ ತಮ್ಮ ಮತ ನೀಡಬೇಕೆಂದು ಮನವಿ ಮಾಡಿದರು. ಮುಂದೆ ರಾಜ್ಯ ರಾಜಕಾರಣದ ದಿಕ್ಕು ಬದಲಾಗಲಿದ್ದು, ಬರುವ ಡಿಸೆಂಬರ್ ಒಳಗೆ ಚುನಾವಣೆ ನಡೆಯಲಿದೆ ಎಂದು ಸಿಂಧ್ಯ ಭವಿಷ್ಯ ನುಡಿದರು.