ಭಾರತೀಯ ಗಣಿ ಪ್ರಾಧಿಕಾರ(ಐಬಿಎಂ) ತಂಡಗಳು ಗಣಿ ಅಕ್ರಮದ ಪರಿಶೀಲನೆಯನ್ನು ಬಳ್ಳಾರಿಯಲ್ಲಿ ಚುರುಕುಗೊಳಿಸಿದ್ದು, ಗೌಪ್ಯ ಕಾರ್ಯಾಚರಣೆ, ಹಠಾತ್ ಕ್ರಮ, ಸ್ಥಳೀಯ ಅಧಿಕಾರಿಗಳ ಮೇಲೆ ಅಪನಂಬಿಕೆಯ ನಡುವೆ ಕಾರ್ಯನಿರ್ವಹಿಸುತ್ತಿದೆ.
ಮತ್ತೊಂದೆಡೆ ಐಬಿಎಂ ಸಂಗ್ರಹಿಸಿದ ಮಾಹಿತಿ ಪಡೆಯಲು ಕೆಲವರು ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಮೂಲವೊಂದು ತಿಳಿಸಿದೆ.
ರಾಜ್ಯ ಪೋಲಿಸ್, ಕಂದಾಯ ಹಾಗೂ ಗಣಿ ಅಧಿಕಾರಿಗಳ ಮೇಲೆ ವಿಶ್ವಾಸವಿಡದೇ ತಮ್ಮ ಕಾರ್ಯಾಚರಣೆಯನ್ನು ಕೇಂದ್ರದ ಅಧಿಕಾರಿಗಳು ರಹಸ್ಯವಾಗಿಡುತ್ತಿದ್ದಾರೆ. ಇದರಿಂದ ಕಂಗೆಟ್ಟ ಅಧಿಕಾರಿಗಳು ತಮ್ಮ ಆಪ್ತರಿಗೆ ಮಾಹಿತಿ ನೀಡಲು ಪರದಾಡುತ್ತಿದ್ದಾರೆ.
ಐಬಿಎಂ ತಂಡ ಅಕ್ರಮ ಗಣಿಗಾರಿಕೆ ಬಗ್ಗೆ ಕೇಂದ್ರದ ಗಣಿ ಸಚಿವಾಲಯಕ್ಕೆ ಮಾಹಿತಿ ರವಾನಿಸುತ್ತಿದ್ದು, ಜಿಲ್ಲೆಯ ಗಣಿ ಉದ್ಯಮಿಗಳಲ್ಲಿ ನಡುಕ ಹುಟ್ಟಿಸಿದೆ. ಕೇಂದ್ರ ತಂಡ ಸುದ್ದಿಗಾರರನ್ನೂ ಸಹ ದೂರವಿಟ್ಟಿದ್ದಾರೆ.