ಡಿಸೆಂಬರ್ 14ರಂದು ನಿಗದಿಯಾಗಿರುವ ವಿಧಾನಮಂಡಲ ಅಧಿವೇಶನ ಮುಂದಕ್ಕೆ ಹಾಕುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದ್ದು, ಡಿ.22ರಿಂದ 31ರವರೆಗೆ ನಡೆಸಲು ನಿರ್ಧರಿಸುವುದಾಗಿ ಹೇಳಿದೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹಸಚಿವ ವಿ.ಎಸ್.ಆಚಾರ್ಯ, ಡಿಸೆಂಬರ್ 18ರಂದು ಮೇಲ್ಮನೆ ಚುನಾವಣೆ ನಡೆಯಲಿದ್ದು, ಡಿ.21ರಂದು ಫಲಿತಾಂಶ ಘೋಷಣೆಯಾಗಲಿದೆ. ಚುನಾವಣೆಯ ಹಿನ್ನೆಲೆಯಲ್ಲಿ ವಿಧಾನಮಂಡಲ ಅಧಿವೇಶನವನ್ನು ಮುಂದೂಡುವಂತೆ ಕೆಲ ಶಾಸಕರು ಒತ್ತಾಯ ಹೇರಿದ್ದರಿಂದ ಮುಂದೂಡಿಕೆ ಬಗ್ಗೆ ನಿರ್ಧರಿಸಲು ಚಿಂತನೆ ನಡೆಸಲಾಗಿದೆ ಎಂದರು.
ಡಿಸೆಂಬರ್ 14ರಂದು ಕಲಾಪ ವ್ಯವಹಾರಗಳ ಸಮಿತಿ ಸಭೆಯನ್ನು ಮಾತ್ರ ನಡೆಸಲು ನಿರ್ಧರಿಸಿದ್ದು, ಆ ಸಭೆಯಲ್ಲಿಯೇ ಅಧಿವೇಶನ ಮುಂದೂಡಿಕೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.