ರಾಜ್ಯದಲ್ಲಿ ಸರ್ವಾಧಿಕಾರದ ಅಧಿಕಾರ ನಡೆಸುವ ಮೂಲಕ ಬಿಜೆಪಿ ಸರ್ಕಾರ ತುಘಲಕ್ ರಾಜ್ಯಭಾರ ನಡೆಸುತ್ತಿದೆ ಎಂದು ಶಾಸಕ ಕೃಷ್ಣಬೈರೇಗೌಡ ಆರೋಪಿಸಿದ್ದಾರೆ.
ಬೆಟ್ಟಹಲಸೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಮೀಸಲಾತಿ ಕುರಿತು ಹೈಕೋರ್ಟ್ ಛೀಮಾರಿ ಹಾಕಿದ್ದರೂ ಸರ್ಕಾರ ಸ್ಥಳೀಯ ಮಟ್ಟದಿಂದ ರಾಜ್ಯಮಟ್ಟದವರೆಗೂ ತುಘಲಕ್ಕೆ ದರ್ಬಾರ್ ನಡೆಸುತ್ತಿದೆ ಎಂದರು.
ಬಿಬಿಎಂಪಿಯಲ್ಲಿ ಪ.ಜಾ., ಪರಿಶಿಷ್ಟ ವರ್ಗಗಳಿಗೆ ಅನ್ವಯಿಸುವ 18ನೇ ಯೋಜನೆಯಡಿ ವಿವಿಧ ಸವಲತ್ತುಗಳಿಗೆ ಉಪಯೋಗಿಸುವ 550ಕೋಟಿ ಹಣ ಹಾಗೆಯೇ ಉಳಿದಿದೆ. ಬ್ಯಾಟರಾಯನಪುರ ಕ್ಷೇತ್ರಕ್ಕೆ 44ಕೋಟಿ ರೂ.ಬೇಕೆಂದು ಪ್ರಸ್ತಾಪನೆ ಸಲ್ಲಿಸಿದ್ದರೂ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಟೀಕಿಸಿದರು.
ಅಕ್ರಮ ಗಣಿಗಾರಿಕೆಯಲ್ಲಿ ರಾಜ್ಯ ಸರ್ಕಾರ ಭಾಗಿಯಾಗಿದ್ದಲ್ಲಿ, ಸಾರ್ವಜನಿಕರ ಮೇಲೆ ಬದ್ಧತೆ ಇದ್ದಲ್ಲಿ, ಮೊದಲು ಇದನ್ನು ಸಿಬಿಐ ತನಿಖೆಗೆ ವಹಿಸಲಿ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.