ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರೆಡ್ಡಿಗಳು ಮತದಾರರಿಗೆ ಮಾಲೀಕರಲ್ಲ: ಸಿದ್ದರಾಮಯ್ಯ (Janardana Reddy | Karnataka | BJP | JDS)
Bookmark and Share Feedback Print
 
NRB
ರಾಜಕೀಯವಾಗಿ ಮೇಲೆ ಬರಲು ಬಿಡುವುದಿಲ್ಲ ಎಂಬ ಜನಾರ್ದನ ರೆಡ್ಡಿ ಹೇಳಿಕೆಗೆ ಮತ್ತೊಮ್ಮೆ ಕಿಡಿಕಾರಿರುವ ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ, ರೆಡ್ಡಿಗಳು ಗಣಿಗಳಿಗೆ ಮಾತ್ರ ಮಾಲೀಕರೇ ವಿನಃ ಮತದಾರರಿಗಲ್ಲ ಎಂದು ತಿರುಗೇಟು ನೀಡಿದ್ದಾರೆ.

ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕಾಗಿ ಇಲ್ಲಿಗೆ ಶುಕ್ರವಾರ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೆಡ್ಡಿ ಸಹೋದರರು ದುಡ್ಡಿನ ಪೊಗರಿನಿಂದ ಮಾತನ್ನಾಡುತ್ತಿದ್ದಾರೆ. ನನ್ನನ್ನು ರಾಜಕೀಯವಾಗಿ ಮುಗಿಸುವುದಾಗಿ ಹೇಳುವ ಅವರ ಹೇಳಿಕೆ ಮೂರ್ಖತನದ್ದು ಎಂದು ಹರಿಹಾಯ್ದರು.

ದುಡ್ಡಿನ ಮದದಿಂದ ಮಾತನಾಡುವ ರೆಡ್ಡಿ ಗಣಿಗಳಿಗೆ ಮಾತ್ರ ಮಾಲೀಕ, ಆದರೆ ಮತದಾರರ ಪ್ರಭುವಿಗೆ ಮಾಲೀಕ ಅಲ್ಲ ಎಂಬುದನ್ನು ಮನಗಾಣಲಿ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ