ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಕ್ರಮ ಗಣಿ:ಮತ್ತೊಂದು ವರದಿ ಕೊಡಿ-ಲೋಕಾಯುಕ್ತಕ್ಕೆ ಸಿಎಂ (BJP | Yeddyurappa | Congress | JDS | Mysore | Lokayuktha)
Bookmark and Share Feedback Print
 
ಅಕ್ರಮ ಗಣಿಗಾರಿಕೆ ಕುರಿತು ತಮ್ಮ ಅಧಿಕಾರ ಅವಧಿಯಲ್ಲಿ ಏನಾಗಿದೆ ಎಂಬುದರ ಕುರಿತು ತನಿಖೆ ನಡೆಸಲು ಲೋಕಾಯುಕ್ತರಿಂದ ಇನ್ನೊಂದು ವರದಿ ಬಯಸಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ನಗರದ ಲಲಿತಮಹಲ್ ಹೆಲಿಪ್ಯಾಡ್‌‌‌ಗೆ ಬಂದಿಳಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಲೋಕಾಯುಕ್ತರು ನೀಡಿರುವ ವರದಿ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಈಗಾಗಲೇ ಸೂಚನೆ ಕೊಟ್ಟಿದ್ದೇನೆ. ಅಕ್ರಮ ಗಣಿಗರಿಕೆ ವಿಚಾರವಾಗಿ ತಮ್ಮ ಅವಧಿಯಲ್ಲಿ ಏನೇನಾಗಿದೆ ಎಂಬುದರ ಬಗ್ಗೆ ತನಿಖೆ ಮಾಡಿ ಮತ್ತೊಂದು ವರದಿ ನೀಡುವಂತೆ ಲೋಕಾಯುಕ್ತರಿಗೆ ಕೋರಿದ್ದೇನೆ . ಹಾಗಂತ ಹಿಂದಿನ ವರದಿ ಬಗ್ಗೆ ತಮಗೆ ಅಸಮಾಧಾನವಾಗಲಿ ವಿಳಂಬಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾದ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಧರಂಸಿಂಗ್ ಅವಧಿಯಲ್ಲಿ 42 ಗಣಿ ಕಂಪೆನಿಗಳಿಗೆ ಹೊಸ ಪರವಾನಗಿ, ಕುಮಾರಸ್ವಾಮಿ ಆಡಳಿತಾವಧಿಯಲ್ಲಿ ಅದಕ್ಕಿಂತಲೂ ಹೆಚ್ಚಾಗಿ ಹಾಗೂ ರಾಷ್ಟ್ರಪತಿಗಳ ಅಧಿಕಾರಾವಧಿಯಲ್ಲಿ 22 ಮೈನಿಂಗ್ ಕಂಪನಿಗಳಿಗೆ ಅನುಮತಿ ನೀಡಲಾಗಿತ್ತು. ಆದರೆ ತಮ್ಮ 18 ತಿಂಗಳ ಅವಧಿಯಲ್ಲಿ ನಾವು ಯಾರಿಗೂ ಅನುಮತಿ ನೀಡಿಲ್ಲ. ಇದು ಕೂಡ ಸರ್ಕಾರದ ಉತ್ತಮ ಕ್ರಮ ಅಲ್ಲವೇ ಎಂದು ಸಿ.ಎಂ ಪ್ರಶ್ನಿಸಿದರು.
ಸಂಬಂಧಿತ ಮಾಹಿತಿ ಹುಡುಕಿ