ಶಿಷ್ಟಾಚಾರ ಉಲ್ಲಂಘಿಸಿ ನಾಡಗೀತೆಯನ್ನು ಹಾಡುತ್ತಿದ್ದ ಸಂದರ್ಭದಲ್ಲಿ ಅದನ್ನು ಮಧ್ಯೆಯೇ ನಿಲ್ಲಿಸಿ ರಾಷ್ಟ್ರಗೀತೆಯನ್ನು ಹಾಡುವಂತೆ ರಾಜ್ಯಪಾಲರು ಆದೇಶಿಸಿದ ಪ್ರಸಂಗ ಶನಿವಾರ ನಡೆಯಿತು.
ರಾಷ್ಟ್ರಗೀತೆಗೆ ಅಗೌರವ ತೋರಿದ್ದಾರೆಂದು ಸಿಟ್ಟಾದ ರಾಜ್ಯಪಾಲ ಎಚ್.ಆರ್.ಭಾರದ್ವಾಜ್, ನಾಡಗೀತೆ ಹಾಡುತ್ತಿದ್ದಾಗ ನಡುವೆ ನಿಲ್ಲಿಸಿದ್ದಾರೆ. ಅದೂ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಮೊದಲಾದ ಗಣ್ಯರು ಇದ್ದ ವೇದಿಕೆಯಲ್ಲಿ.
ಸಂವಿಧಾನಾತ್ಮಕ ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಳ್ಳುವ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆಗೆ ಆದ್ಯತೆ ನೀಡಬೇಕು ಎಂಬ ಶಿಷ್ಟಾಚಾರ ಉಲ್ಲಂಘನೆಯ ವಿರುದ್ಧ ರಾಜ್ಯಪಾಲರು ಆಕ್ರೋಶಗೊಂಡು ನಾಡಗೀತೆ ಹಾಡುವುದನ್ನು ಮಧ್ಯೆಯೇ ನಿಲ್ಲಿಸಿ, ರಾಷ್ಟ್ರಗೀತೆ ಹಾಡುವಂತೆ ಸೂಚಿಸಿದ್ದರು.
ಪರ್ಯಾಯ ವ್ಯಾಜ್ಯ ಪರಿಹಾರ ಅಂತಾರಾಷ್ಟ್ರೀಯ ಕೇಂದ್ರ ಖಾಸಗಿ ಹೋಟೆಲ್ ಒಂದರಲ್ಲಿ ಸಂಧಾನ ಮತ್ತು ಮಧ್ಯಸ್ಥಿಕೆ ಕುರಿತ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಈ ಘಟನೆ ನಡೆಯಿತು.