ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಗ್ರಾ.ಪಂ.ಸದಸ್ಯರನ್ನು ಹೈಜಾಕ್ ಮಾಡಿರುವ ಪ್ರಕರಣದ ಬಗ್ಗೆ ಕಿಡಿಕಾರಿರುವ ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ, ಇದು ಆಪರೇಶನ್ ಕಮಲದ ಮತ್ತೊಂದು ರೂಪ ಎಂದು ಹೇಳಿದರು.
ಭಾನುವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜನಪ್ರತಿನಿಧಿಗಳಿಗೆ ಹಣದ ಆಮಿಷ ಒಡ್ಡಿ ಹೈಜಾಕ್ ಮಾಡುವಂತಹ ಘಟನೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾದುದು.ಇಂತಹ ಕೊಳಕು ರಾಜಕೀಯ ಮಾಡುವ ರೆಡ್ಡಿ ಸಹೋದರರಿಗೆ ಜನರೇ ಛೀಮಾರಿ ಹಾಕಿ ಬುದ್ದಿ ಕಲಿಸಬೇಕು ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಣ ಕೊಟ್ಟು ವ್ಯವಹಾರ ಮಾಡುವುದು ರಾಜಕಾರಣವಲ್ಲ, ಹಣದ ಮದದಿಂದ ಮೆರೆಯುತ್ತಿರುವ ರೆಡ್ಡಿಗಳಿಗೆ ಜನರೇ ಬುದ್ಧಿ ಕಲಿಸಬೇಕು ಎಂದ ಸಿದ್ದರಾಮಯ್ಯ, ದಯವಿಟ್ಟು ಸ್ಥಳೀಯ ಸಂಸ್ಥೆಗಳ ಸದಸ್ಯರು ಹಣದ ಆಮಿಷಕ್ಕೆ ತಮ್ಮ ಮತಗಳನ್ನು ಮಾರಿಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡರು.
ನಿಮ್ಮ ಮತಗಳನ್ನು ಹಣಕ್ಕಾಗಿ ಮಾರಿಕೊಂಡಲ್ಲಿ ಅದು ಮತದಾರರ ಮೇಲೂ ಪರಿಣಾಮ ಬೀರಲಿದೆ. ಅಲ್ಲದೆ, ಇದು ಪ್ರಜಾಪ್ರಭುತ್ವಕ್ಕೆ ಮಾರಕವಾದದ್ದು ಎಂದು ಹೇಳಿದರು.