ಬೆಂಗಳೂರು: , ಭಾನುವಾರ, 13 ಡಿಸೆಂಬರ್ 2009( 15:17 IST )
PTI
ಬಿಬಿಎಂಪಿ ಚುನಾವಣೆಯನ್ನು ಮತ್ತೆ ಮುಂದೂಡುವಂತೆ ಆಡಳಿತಾರೂಢ ಬಿಜೆಪಿ ಸೇರಿದಂತೆ ಪ್ರಮುಖ ಪಕ್ಷಗಳು ಸುಪ್ರೀಂಕೋರ್ಟ್ ಮೆಟ್ಟಿಲೇರುವ ಸಾಧ್ಯತೆಗಳಿವೆ ಎಂದು ಮೂಲವೊಂದು ತಿಳಿಸಿದೆ.
ಪ್ರಸ್ತುತ ಯಾವುದೇ ಪಕ್ಷಕ್ಕೂ ಚುನಾವಣೆಗಳನ್ನು ಎದುರಿಸುವ ಮನಸ್ಸಿಲ್ಲ. ಅದಕ್ಕೆ ಮೀಸಲಾತಿ, ವಾರ್ಡ್‌ವಾರು ಮೀಸಲಾತಿಗಳಿಂದಾಗಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ತೊಂದರೆ ಉಂಟಾಗಿದೆ.
ಈ ಹಿನ್ನೆಲೆಯಲ್ಲಿ ಹೇಗೆ ಚುನಾವಣೆಗಳನ್ನು ಮುಂದೂಡಬೇಕೆಂಬ ಬಗ್ಗೆ ಚಿಂತನೆಗಳು ಸಾಗಿವೆ. ಮೇಲ್ನೋಟಕ್ಕೆ ಎಲ್ಲಾ ಪಕ್ಷಗಳು ಚುನಾವಣೆ ಎದುರಿಸಲು ಸಿದ್ಧ ಎನ್ನುತ್ತಿದ್ದರೂ ಪರಿಸ್ಥಿತಿ ಪೂರಕವಾಗಿಲ್ಲ ಎಂದು ಹೇಳಲಾಗುತ್ತಿದೆ.
ಹಾಗಾಗಿ ರಾಜಕೀಯ ಪಕ್ಷಗಳು ಸುಪ್ರೀಂಕೋರ್ಟ್ ಮೊರೆ ಹೋಗಲು ತೀರ್ಮಾನಿಸಿವೆ ಎನ್ನಲಾಗಿದೆ. ಹೈಕೋರ್ಟ್ ಆದೇಶದಂತೆ ಮುಂದಿನ ಫೆಬ್ರುವರಿ 21ರಿಂದ ಚುನಾವಣೆ ನಡೆಯಬೇಕಿತ್ತು.