ಆರ್‌ಎಸ್‌ಎಸ್ ಎಂದ ತಕ್ಷಣ ನೆನಪಿಗೆ ಬರುವುದೇ ಖಾಕಿ ಚಡ್ಡಿ, ಬಿಳಿ ಅಂಗಿ ಧರಿಸಿರುವ 'ಗಣವೇಷ'. ಆದರೆ ಇನ್ನು ಮುಂದೆ ಗಣವೇಷಧಾರಿಗಳ ಸಮವಸ್ತ್ರ ಬದಲಾಯಿಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಿರ್ಧರಿಸಿದೆ.
ಕಾಲಚಕ್ರದಲ್ಲಿ ಎಲ್ಲವೂ ಬದಲಾಗುತ್ತಿರುವ ಸಂದರ್ಭದಲ್ಲಿ ಹಾಗೂ ಯುವಕರನ್ನು ತನ್ನತ್ತ ಸೆಳೆಯುವ ನಿಟ್ಟಿನಲ್ಲಿ ಆರ್‌ಎಸ್‌ಎಸ್ ತನ್ನ ಟ್ರೇಡ್ ಮಾರ್ಕ್ ಆದ ಖಾಕಿ ಚಡ್ಡಿ ಬದಲು ಪ್ಯಾಂಟ್ ಅನ್ನು ಸಮವಸ್ತ್ರವನ್ನಾಗಿ ಬಳಸಲು ಯೋಜನೆ ರೂಪಿಸಿದೆ.
ನೂತನ ಸಮವಸ್ತ್ರ ಮಾರ್ಚ್ ತಿಂಗಳಿನಲ್ಲಿ ಜಾರಿಗೆ ಬರಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ನಾಯಕರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಆರ್‌ಎಸ್‌ಎಸ್ 'ಗಣವೇಷ'ದ ವಸ್ತ್ರ ವಿನ್ಯಾಸದ ಬದಲಾವಣೆಗೆ ಇತ್ತೀಚೆಗಷ್ಟೇ ಸಂಘದ ವರಿಷ್ಠ ಮೋಹನ್ ಭಾಗ್ವತ್ ಕೂಡ ಒಲವು ತೋರಿ, ವಸ್ತ್ರ ವಿನ್ಯಾಸದ ಬದಲಾವಣೆ ಆಗಲಿದೆ ಎಂದು ಮುನ್ಸೂಚನೆ ಕೊಟ್ಟಿದ್ದರು.