ಚಿಕ್ಕಮಗಳೂರು, ಗುರುವಾರ, 17 ಡಿಸೆಂಬರ್ 2009( 15:21 IST )
ರಾಜ್ಯದ ಗಡಿನಾಡಾದ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂಬುದು ನಿರಂತರವಾಗಿ ಕೇಳಿ ಬರುತ್ತಿರುವ ಹಳೆಯ ರಾಗ. ಇದೀಗ ಜೋಧಪುರದಿಂದ ಪ್ರಕಟವಾಗಿರುವ ನೂತನ ಗೈಡ್‌ಯೊಂದರ ಪ್ರಕಾರ ದಕ್ಷಿಣ ಕನ್ನಡ ಮತ್ತು ಹಾಸನ ಜಿಲ್ಲೆಯ ಕೆಲವು ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲಾಗಿದೆ!
ಜೋಧಪುರದಿಂದ ಪ್ರಕಟವಾಗುವ ಕರ್ನಾಟಕ ರೂಟ್ ಅಟ್ಲಾಸ್ ಗೈಡ್‌ನ 32ನೇ ಪುಟದಲ್ಲಿ ಕೊಡಗು ಜಿಲ್ಲೆಯ ನಕ್ಷೆಗೆ ಸಂಬಂಧಿಸಿದಂತೆ ಪ್ರಕಟವಾಗಿರುವ ಮಾಹಿತಿಯಲ್ಲಿ ಈ ಗಂಭೀರ ಪ್ರಮಾದ ನುಸುಳಿದೆ.
ಈ ನಕಾಶೆಯಲ್ಲಿ ಸುಳ್ಯ, ಸುಬ್ರಹ್ಮಣ್ಯ, ಪಂಜ, ಶಿರಾಡಿ, ಕಡಬ, ಅರಕಲಗೂಡು, ರಾಮನಾಥಪುರ ಇನ್ನಿತರೆ ಪ್ರದೇಶಗಳನ್ನು ಪುಕ್ಕಟೆಯಾಗಿ ಮಹಾರಾಷ್ಟ್ರಕ್ಕೆ ಸೇರಿಸಿ ಮುದ್ರಿಸಲಾಗಿದೆ. ಇದು ಉದ್ದೇಶಪೂರ್ವಕವಾಗಿಯೇ ಮಾಡಿದ ಪ್ರಮಾದವೇ ಅಥವಾ ನಿರ್ಲಕ್ಷ್ಯದಿಂದ ಮಾಡಲಾಗಿದೆಯೇ ಎಂಬುದು ತಿಳಿದು ಬಂದಿಲ್ಲ.