ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮಲ್ಪೆ: ಅಗ್ನಿಶಾಮಕದಳ ನಿರ್ಲಕ್ಷ್ಯ-ಕಾರ್ಮಿಕ ಸಜೀವ ದಹನ (Udupi | Malpe | Tegma Shipyard | Police)
Bookmark and Share Feedback Print
 
ಉಡುಪಿಯ ಮಲ್ಪೆ ಸಮೀಪದ ಹಡಗು ತಯಾರಿಕಾ ಕೇಂದ್ರವೊಂದರಲ್ಲಿ ಬುಧವಾರ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಕಾರ್ಮಿಕನೊಬ್ಬ ಸಜೀವವಾಗಿ ದಹನವಾಗಿದ್ದು, ಈ ಸಂದರ್ಭದಲ್ಲಿ ಬೆಂಕಿ ನಂದಿಸಲು ಕಂಪನಿಯಲ್ಲಿನ ಅವ್ಯವಸ್ಥೆ ಮತ್ತು ಅಗ್ನಿಶಾಮಕದಳ ವಿಳಂಬ ನೀತಿ ಅನುಸರಿಸಿದ್ದನ್ನು ವಿರೋಧಿಸಿ ಕಾರ್ಮಿಕರು ತೀವ್ರ ಹಿಂಸಾಚಾರಕ್ಕೆ ಇಳಿದಿದು ಪೀಠೋಪಕರಣಗಳನ್ನು ಧ್ವಂಸಗೊಳಿಸಿದ ಘಟನೆ ನಡೆದಿದೆ.

ಮಲ್ಪೆಯ ಟೆಗ್ಮಾ ಶಿಪ್‌ಯಾರ್ಡ್ ಕಂಪನಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿತ್ತು. ಆದರೆ ಬೆಂಕಿ ನಂದಿಸಲು ಕಂಪನಿಯಲ್ಲಿ ಯಾವುದೇ ಸಲಕರಣೆ ಇರಲಿಲ್ಲವಾಗಿತ್ತು. ಅಲ್ಲದೇ ಅಗ್ನಿಶಾಮಕ ಸಿಬ್ಬಂದಿಗಳು ಕೂಡ ವಿಳಂಬವಾಗಿ ಬಂದ ಪರಿಣಾಮ ಉತ್ತರ ಪ್ರದೇಶದ ಕಾರ್ಮಿಕ ಬಬ್ಲೂ ಸಿಂಗ್ ಸಜೀವವಾಗಿ ದಹನವಾಗಬೇಕಾಯಿತು.

ಈ ಘಟನೆಯಿಂದ ಆಕ್ರೋಶಿತಗೊಂಡ ಕಂಪೆನಿ ಕಾರ್ಮಿಕರು ಕಂಪನಿಯ ಪೀಠೋಪಕರಣಗಳನ್ನು ಧ್ವಂಸಗೊಳಿಸಿ, ಸುತ್ತಮುತ್ತಲಿನ ಹೂ ಕುಂಡಗಳನ್ನು ಪುಡಿಗೈದರು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಇದೀಗ ಕಂಪನಿಯಲ್ಲಿ ಹೊತ್ತಿಕೊಂಡ ಬೆಂಕಿ ನಂದಿಸಲು ಅಗ್ನಿಶಾಮಕ ದಳ ಹರಸಾಹಸ ಪಡುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ