ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹೊಸ ವರ್ಷ: ಬೆಂಗ್ಳೂರಲ್ಲಿ ಮಧ್ಯರಾತ್ರಿವರೆಗೂ ಕುಡೀಬಹುದು! (Bangalore | Bar and Restaurants | New Year-10 | Shankar Bidari)
Bookmark and Share Feedback Print
 
ಹೊಸ ಸಂಭ್ರಮಾಚರಣೆಯ ಸಂದರ್ಭದಲ್ಲಿ ಬೆಂಗಳೂರಿಗರು ಪೊಲೀಸರ ಭಯ ಇಲ್ಲದಯೇ ಮಧ್ಯರಾತ್ರಿಯವರೆಗೂ ಪಾನಗೋಷ್ಠಿ ನಡೆಸಿ ಹೊಸವರ್ಷವನ್ನು ಆಚರಿಸಿಕೊಳ್ಳಬಹುದಾಗಿದೆ!.

ಬೆಂಗಳೂರು ಕಮಿಷನರೇಟ್ ವ್ಯಾಪ್ತಿಗೆ ಸೇರಿದ ಪ್ರದೇಶದಲ್ಲಿರುವ ಬಾರ್, ಪಬ್, ರೆಸ್ಟೋರೆಂಟ್, ಹೋಟೆಲ್ ಹಾಗೂ ಆಹಾರ ಪೂರೈಕೆ ಸ್ಥಳಗಳಿಗೆ ಒಂದು ಗಂಟೆ ಕಾಲ ಹೆಚ್ಚುವರಿ ಸಮಯ ನೀಡಿರುವುದಾಗಿ ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ತಿಳಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್ 31ರ ರಾತ್ರಿ 12.30ರ ನಂತರ ಮದ್ಯದಂಗಡಿಗಳನ್ನು ಮುಚ್ಚುವಂತೆ ಆದೇಶ ನೀಡಲಾಗಿತ್ತು. ಆದರೆ ಡಿ.31ರ ರಾತ್ರಿಯಿಂದ 2010ರ ಜನವರಿ 1ರ 1ಗಂಟೆವರೆಗೂ ಬಾರ್‌ಗಳ ಬಾಗಿಲು ಪಾನ ಪ್ರಿಯರಿಗೆ ಮುಕ್ತವಾಗಿಡುವಂತೆ ಸೂಚಿಸಲಾಗಿದೆ.

ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರ ಮನವಿ ಹಿನ್ನೆಲೆಯಲ್ಲಿ ಆದೇಶ ನೀಡಿದ್ದು, ಡಿ.31ರ ಮಧ್ಯಾಹ್ನ 3ಗಂಟೆಯೊಳಗೆ ಅಗತ್ಯ ದಾಖಲೆಗಳನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡಬೇಕು ಎಂದು ಬಿದರಿ ತಿಳಿಸಿದ್ದಾರೆ.ಅಲ್ಲದೇ ಡಿ.31ರ ರಾತ್ರಿ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಮೇಲೆ ಯಾವುದೇ ಪ್ರಕರಣ ದಾಖಲಿಸುವುದಿಲ್ಲ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ