ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರೇಣುಕಾಚಾರ್ಯ ಪ್ರಮಾಣವಚನ ಸಮಾರಂಭಕ್ಕೆ ಬಹಿಷ್ಕಾರ (Renukacharya | BJP | Congress | JDS | Yeddyurappa)
Bookmark and Share Feedback Print
 
NRB
ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಗುರುವಾರ ರಾಜಭವನದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವ ಸಮಾರಂಭಕ್ಕೆ ಗೈರು ಹಾಜರಾಗುವುದಾಗಿ ಬೆಂಗಳೂರಿನ ಕೆಲವು ಅತೃಪ್ತ ಶಾಸಕರು ತಿಳಿಸಿದ್ದಾರೆ.

ರೇಣುಕಾಚಾರ್ಯ ಅವರು ಸಚಿವರಾಗುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಮಂಗಳವಾರ ಶಾಸಕ ನಂದೀಶ್ ರೆಡ್ಡಿ ನೇತೃತ್ವದಲ್ಲಿ ಸುಮಾರು 28 ಶಾಸಕರು ಸಹಿ ಸಂಗ್ರಹ ನಡೆಸಿದ್ದರು. ಆದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತುಕತೆ ನಡೆಸುವ ಮೂಲಕ ಭಿನ್ನಮತ ಶಮನಗೊಂಡು ರೇಣುಕಾಚಾರ್ಯ ಸಚಿವಪಟ್ಟದ ಹಾದಿ ಸುಗಮವಾಗಿತ್ತು.

ಇದೀಗ ಬೂದಿಮುಚ್ಚಿದ ಕೆಂಡ ಎಂಬಂತಾಗಿರುವ ಬಿಜೆಪಿಯ ಬೆಂಗಳೂರು ನಗರದ ಶಾಸಕರು ಗರಂ ಆಗಿದ್ದು, ನಾಳೆ ನಡೆಯಲಿರುವ ರೇಣುಕಾಚಾರ್ಯ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹೋಗುವುದಿಲ್ಲ ಎಂದು ಶಾಸಕ ಸತೀಶ್ ರೆಡ್ಡಿ ತಿಳಿಸಿದ್ದಾರೆ. ಅಲ್ಲದೇ, ವಿಧಾನಸಭಾ ಅಧಿವೇಶನದಲ್ಲೂ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ. ಬೆಳ್ಳುಬ್ಬಿ, ನಾರಾಯಣಸ್ವಾಮಿಯಂತಹ ಹಿರಿಯರು ಇದ್ದಾಗಲೂ ಹೊಸಬರಿಗೆ ಸಚಿವ ಸ್ಥಾನ ನೀಡುವುದು ಸರಿಯಲ್ಲ ಎಂಬುದಾಗಿಯೂ ಅವರು ಈ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಒಂದು ಹಂತದಲ್ಲಿ ಬಿಜೆಪಿಯಲ್ಲಿನ ಭಿನ್ನಮತ ಶಮನಗೊಂಡಂತೆ ಕಂಡರೂ ಕೂಡಾ, ಅತೃಪ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಆಡಳಿತಾರೂಢ ಬಿಜೆಪಿ ಸರ್ಕಾರದ ಗಂಡಾಂತರ ಮುಂದುವರಿದಂತಾಗಿದೆ.

ಗುರುವಾರ ಬೆಳಿಗ್ಗೆ 10.30ಕ್ಕೆ ರಾಜಭವನದಲ್ಲಿ ರೇಣುಕಾಚಾರ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರೇಣುಕಾಚಾರ್ಯಗೆ ವಸತಿ ಖಾತೆ ದೊರೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ