'ಶೋಭಾ ಕರಂದ್ಲಾಜೆ ಅವರಿಗೆ ಮತ್ತೆ ಮಂತ್ರಿಗಿರಿ ಕೊಡಿ' ಇದು ಆಡಳಿತ ಪಕ್ಷದವರಿಗೆ ವಿಧಾಮಂಡಲ ಕಲಾಪದಲ್ಲಿ ಪ್ರತಿಪಕ್ಷದ ಸದಸ್ಯರು ಹೇಳಿರುವ ಮಾತು.
ನೆರೆ ಹಾವಳಿ ಸಂದರ್ಭದಲ್ಲಿ ರಾಯಚೂರಿಗೆ ಆಗಮಿಸಿದ್ದ ಶೋಭಾ, ಅಲ್ಲಿನ ಜನರಿಗೆ ಸೌಲಭ್ಯ ಒದಗಿಸಲು ಪ್ರಯತ್ನಿಸಿದರು. ಅವರು ಇಲ್ಲದೆ ಹೋಗಿದ್ದಲ್ಲಿ ನಮ್ಮ ಜಿಲ್ಲೆಗೆ ಪರಿಹಾರವೇ ಸಿಗುತ್ತಿರಲಿಲ್ಲ ಎಂದು ಶಾಸಕ ಶಂಕರಪ್ಪ ಹೇಳಿದರು.
ಇದೇ ವೇಳೆ ಪ್ರತಿಪಕ್ಷದ ಎಂ.ಸಿ.ನಾಣಯ್ಯ, ಉಗ್ರಪ್ಪ, ಕೊಂಡಯ್ಯ, ದತ್ತ ಸೇರಿದಂತೆ ಎಲ್ಲ ಸದಸ್ಯರೂ ಮೇಜು ತಟ್ಟಿ ಶೋಭಾ ಅವರನ್ನು ಅಭಿನಂದಿಸಿದರು. ಶೋಭಾರಂತ ಹೆಣ್ಣುಮಗಳನ್ನು ಮಂತ್ರಿಯಾಗಿ ಉಳಿಸಿಕೊಳ್ಳುವಲ್ಲಿ ನಿಮ್ಮ ಪಕ್ಷ ವಿಫಲವಾಗಿದೆ ಎಂದು ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಆರೋಪ ಮಾಡಿದವು.
ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ಮಾಡಿ, ನಾನಾ ಒತ್ತಡಗಳನ್ನು ತಂದು ಶೋಭಾ ಕರಂದ್ಲಾಜೆ ಅವರನ್ನು ಮಂತ್ರಿ ಮಾಡಿಕೊಳ್ಳಿ ಕೂಗಿಗೆ ಬೆಲೆ ಇಲ್ಲದಂತಾಗಿರುವುದು ವಿಪರ್ಯಾಸ ಎಂದಾಗ ಆಡಳಿತಾರೂಢ ಬಿಜೆಪಿ ಸದಸ್ಯರು ಮೌನಕ್ಕೆ ಶರಣಾದರು.