ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸರ್ಕಾರ ಉರುಳಿಸಲು ಎಚ್‌ಡಿಕೆ ರಹಸ್ಯ ಸಭೆ (Yeddyurappa | BJP | Kumaraswamy | Congress | JDS)
Bookmark and Share Feedback Print
 
ಭಿನ್ನಮತದ ತಲೆನೋವಿನಿಂದ ಸರ್ಕಾರವನ್ನು ಸುಭದ್ರಗೊಳಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಪರದಾಡುತ್ತಿದ್ದರೆ, ಮತ್ತೊಂದೆಡೆ ಆಡಳಿತಾರೂಢ ಕೇಸರಿ ಪಕ್ಷದ ಸರ್ಕಾರವನ್ನು ಉರುಳಿಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅತೃಪ್ತ ಬಿಜೆಪಿ ಶಾಸಕರೊಂದಿಗೆ ರಹಸ್ಯ ಮಾತುಕತೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.

ಬಿಜೆಪಿಯ 8-10 ಮಂದಿ ಶಾಸಕರೊಂದಿಗೆ ಕಳೆದ ರಾತ್ರಿ ರಹಸ್ಯವಾಗಿ ಭೇಟಿ ಮಾಡಿರುವ ಕುಮಾರಸ್ವಾಮಿ,ಆಡಳಿತ ಸರ್ಕಾರವನ್ನು ಕೊನೆಗಾಣಿಸಲು ಸಹಕಾರ ನೀಡುವಂತೆ ಮನ ಒಲಿಸುವ ಯತ್ನ ನಡೆಸಿದ್ದಾರೆ.

ನಗರದ ಯು.ಬಿ. ಸಿಟಿ ಬಳಿಯ ಜಮೀರ್ ಅಹಮದ್ ಅವರ ಅತಿಥಿ ಗೃಹದಲ್ಲಿ 8-10 ಮಂದಿ ಬಿಜೆಪಿ ಶಾಸಕರನ್ನು ರಹಸ್ಯವಾಗಿ ಭೇಟಿ ಮಾಡಿ ಸರ್ಕಾರವನ್ನು ಉರುಳಿಸುವ ಸಲುವಾಗಿ ಮಾತುಕತೆ ನಡೆಸಲಾಗಿದೆ.

ಬಿಜೆಪಿ ಸರ್ಕಾರವನ್ನು ಉರುಳಿಸುವ ಪಣ ತೊಟ್ಟಿರುವ ಎಚ್.ಡಿ.ಕೆಗೆ ಕಾಂಗ್ರೆಸ್ ಮುಖಂಡರಿಂದ ಪೂರಕ ಸಹಕಾರ ದೊರೆತಿಲ್ಲವಾಗಿತ್ತು. ಆಡಳಿತಾರೂಢ ಸರ್ಕಾರವನ್ನು ಉರುಳಿಸಿ ಪಕ್ಷದ ಹೆಸರು ಹಾಳು ಮಾಡಿಕೊಳ್ಳುವುದು ಬೇಡ ಎಂಬುದು ಕಾಂಗ್ರೆಸ್ ಅನಿಸಿಕೆ. ಆದರೂ ಪಟ್ಟು ಬಿಡದ ಕುಮಾರಸ್ವಾಮಿ ಇದೀಗ ಬಿಜೆಪಿ ಶಾಸಕರ ಬೆನ್ನು ಬಿದ್ದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ