ಬೆಂಗಳೂರು , ಶುಕ್ರವಾರ, 25 ಡಿಸೆಂಬರ್ 2009( 11:05 IST )
ರಾಜ್ಯದ ಜನತೆ ಬರಗಾಲ ಹಾಗೂ ಅತಿವೃಷ್ಠಿಯಿಂದ ಕಂಗಾಲಾಗಿರುವ ಮಧ್ಯೆಯು ಮುಖ್ಯಮಂತ್ರಿ ಹಾಗೂ ಸಚಿವರ ಮನೆಗಳ ನವೀಕರಣಕ್ಕೆ 5 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧಿಕೃತ ನಿವಾಸಕ್ಕೆ 77.43 ಲಕ್ಷ ರೂಪಾಯಿ ಹಾಗೂ ಕಂದಾಯ ಸಚಿವ ಕರುಣಾಕರ ರೆಡ್ಡಿ ಅವರ ನಿವಾಸದ ನವೀಕರಣಕ್ಕೆ ಗರಿಷ್ಠ89.47 ಲಕ್ಷ ರೂಪಾಯಿಗಳನ್ನು ವೆಚ್ಚವಾಗಿದೆ.
ಬಿಜೆಪಿ ಸರಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ನಂತರ 18 ಸಚಿವರುಗಳ ಮನೆ ನವೀಕರಣಕ್ಕೆ 6.78ಕೋಟಿ ರೂಪಾಯಿಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, 5 ಕೋಟಿ ವೆಚ್ಚ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸದನದಲ್ಲಿ ತಿಳಿಸಿದ್ದಾರೆ.
ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರ ನಿವಾಸದ ನವೀಕರಣಕ್ಕೆ 38.85 ಲಕ್ಷ ರೂಪಾಯಿ,ಗೃಹ ಸಚಿವ ಆಚಾರ್ಯ ಅವರ ನಿವಾಸಕ್ಕೆ 47.12 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ವಿವರಣೆ ನೀಡಿದ್ದಾರೆ.
ಮುಖ್ಯಮಂತ್ರಿಗಳು, ಸಚಿವರು ಹಾಗೂ ಶಾಸಕರು ಸರಳ ಜೀವನ ನಡೆಸಬೇಕು ಎನ್ನುವ ಸಲಹೆ ಸೂಕ್ತವಾದುದು. ಇನ್ನು ಮುಂದೆ ದುಂದುವೆಚ್ಚಕ್ಕೆ ಕಡಿವಾಣ ಹಾಕಲಾಗುವುದು ಎಂದು ಯಡಿಯೂರಪ್ಪ ತಿಳಿಸಿದ್ದಾರೆ.