ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕರ್ನಾಟಕ ಎಂದಿಗೂ ವಿಭಜನೆಯಾಗದು: ಚಿದಾನಂದಮೂರ್ತಿ (karnataka, division, chidanand murthy)
Bookmark and Share Feedback Print
 
ರಾಜ್ಯದಲ್ಲೂ, ತುಳುನಾಡು, ಹೈದರಾಬಾದ್ ಕರ್ನಾಟಕ, ಕೊಡಗು ಪ್ರತ್ಯೇಕ ರಾಜ್ಯ ಬೇಡಿಕೆ ಪ್ರಬಲವಾದರೆ ಜನ ಜೀವನ ಅಸ್ತವ್ಯಸ್ತವಾಗಬಹುದೇ ವಿನಃ ಕರ್ನಾಟಕ ಎಂದಿಗೂ ಒಡೆಯುವುದಲ್ಲ ಎಂದು ಹಿರಿಯ ಸಂಶೋಧಕ ಡಾ| ಎಂ. ಚಿದಾನಂದಮೂರ್ತಿ ಹೇಳಿದ್ದಾರೆ.

ನಗರದಲ್ಲಿ ಖಾಸಗಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಆಂಧ್ರಪ್ರದೇಶದಲ್ಲಿ ವಿಭಜಿಸುವ ಚಳವಳಿ ಇದೀಗ ತಾರಕಕ್ಕೇರಿದೆ. ಈ ಹಿಂದೆ ಕರ್ನಾಟಕದಲ್ಲೂ ವಿಭಜಿಸುವ ಹುನ್ನಾರ ನಡೆದಿತ್ತು. ಆದರೆ ಆ ಮಾತುಗಳು ಈಗ ದುರ್ಬಲವಾಗಿವೆ. ಏನೇ ಆದರೂ ಕರ್ನಾಟಕ ಅವಿಭಾಜ್ಯವಾಗಿರುತ್ತದೆ ಎಂದು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಾಬರಿ ಹುಟ್ಟಿಸುವ ಸಂಗತಿಗಳು ನಡೆಯುತ್ತಿರುತ್ತವೆ. ಭಾರತದಲ್ಲೂ ಇಂತಹ ಕಾರ್ಯ ನಡೆದಿವೆ. ಬೇರೆ ಬೇರೆ ಹೆಸರುಗಳಿದ್ದರೂ ಎಲ್ಲಾ ದೇವರೂ ಒಂದೇ ಎಂಬ ಸಂದೇಶವನ್ನು ನಾವು ಹರಡಬೇಕಿದೆ ಎಂದ ಅವರು ತಿಳಿಸಿದರು.

ಅಲ್ಲದೆ, ವಂದೇಮಾತರಂಗೆ ಅಪಚಾರವೆಸಗುವ ಸಂಘಟನೆಗಳ ವಿರುದ್ಧ ಕೇಂದ್ರ ಸರ್ಕಾರ ಸೂಕ್ತ ಕ್ರಮ ಜರುಗಿಸುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ