ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸರ್ಕಾರಿ ಬಸ್ ಸೌಲಭ್ಯ ಕಾಣದ ಗ್ರಾಮಗಳ ಸಂಖ್ಯೆ 6385! (BJP | Ashok | Vidhana parishath | Yeddyurappa | KSRTC)
Bookmark and Share Feedback Print
 
NRB
ರಾಜ್ಯದ 6385 ಗ್ರಾಮಗಳು ಇದುವರೆಗೂ ಸರ್ಕಾರಿ ಬಸ್ಸುಗಳ ಓಡಾಟವನ್ನೇ ಕಂಡಿಲ್ಲ. ಇದು ನಂಬಲೇಬೇಕಾದ ವಿಷಯ . ಸ್ವತಃ ಸಾರಿಗೆ ಸಚಿವರೇ ವಿಧಾನಪರಿಷತ್ ಕಲಾಪದಲ್ಲಿ ಈ ಸತ್ಯವನ್ನು ಬಹಿರಂಗಗೊಳಿಸಿದ್ದಾರೆ!

ವಿಧಾನಪರಿಷತ್ತಿನಲ್ಲಿ ಈ ವಿಷಯ ತಿಳಿಸಿದ ಸಾರಿಗೆ ಸಚಿವ ಆರ್. ಅಶೋಕ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ವಾಯುವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ 29,337 ಹಳ್ಳಿಗಳು ಬರುತ್ತವೆ. ಅದರಲ್ಲಿ ಮೂಲ ಸೌಕರ್ಯದ ಕೊರತೆಯಿಂದಾಗಿ 6385 ಹಳ್ಳಿಗಳಿಗೆ ಬಸ್ ಸೌಲಭ್ಯ ಒದಗಿಸಲು ಸಾಧ್ಯವಾಗಿಲ್ಲ ಎಂದರು.

ಬಸ್‌ಗಳು ಓಡಾಡಲು ಯೋಗ್ಯವಾದಂತಹ ರಸ್ತೆಗಳು ನಿರ್ಮಾಣವಾದ ಕೂಡಲೇ ಈ ಎಲ್ಲಾ ಗ್ರಾಮಗಳಿಗೂ ಅಗತ್ಯ ಸಾರಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಅಶೋಕ್ ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ