ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪರಿಹಾರವಾಗದ ಭಿನ್ನಮತ-ಕೆಲವರು ಪಿತೂರಿ ನಡೆಸ್ತಿದ್ದಾರೆ: ಬೇಳೂರು (Beluru | BJP | Yeddyurappa | Renukachary)
Bookmark and Share Feedback Print
 
'ಪಕ್ಷದೊಳಗೆ ತಮ್ಮ ವಿರುದ್ಧ ಮಸಲತ್ತು ನಡೆಸುತ್ತಿರುವುದಾಗಿ ಆರೋಪಿಸಿರುವ ಶಾಸಕ ಬೇಳೂರು ಗೋಪಾಲಕೃಷ್ಣ, ಅಂತಹವರ ಹೆಸರನ್ನು ಶೀಘ್ರದಲ್ಲೇ ಬಹಿರಂಗಪಡಿಸುವುದಾಗಿ' ಗುಡುಗಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಿತ್ರ ರೇಣುಕಾಚಾರ್ಯ ಅವರಿಗೆ ವಸತಿ ಖಾತೆಯನ್ನೇ ನೀಡಬೇಕು ಎಂಬುದಾಗಿಯೂ ಈ ಸಂದರ್ಭದಲ್ಲಿ ಒತ್ತಾಯಿಸಿದರು.

ನಮ್ಮ ವಿರುದ್ಧ ಕೆಲವರು ಇನ್ನೂ ಮಸಲತ್ತು ನಡೆಸುತ್ತಿದ್ದಾರೆ. ಆದರೆ ಅಂತಹ ಪಿತೂರಿಗಳಿಗೆಲ್ಲಾ ಹೆದರೋಲ್ಲ. ಕೆಲವೇ ದಿನಗಳಲ್ಲಿ ಪಕ್ಷದೊಳಗೆ ಪಿತೂರಿ ನಡೆಸುತ್ತಿರುವವರ ಹೆಸರು ಹೊರಹಾಕ್ತೇನೆ ಎಂದು ಹೇಳುವ ಮೂಲಕ ಬಿಜೆಪಿ ಭಿನ್ನಮತ ಮತ್ತೆ ಮುಂದುವರಿದಂತಾಗಿದೆ.

ಹೈಕಮಾಂಡ್ ಬಯಸಿದ್ರೆ ಸಚಿವನಾಗ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಬೇಳೂರು, ರೇಣುಕಾಚಾರ್ಯ ಅವರ ವರ್ಚಸ್ಸನ್ನು ಕುಗ್ಗಿಸಲುವ ನಿಟ್ಟಿನಲ್ಲಿ ಅವರಿಗೆ ಖಾತೆ ನೀಡುವಲ್ಲಿಯೂ ಪಿತೂರಿ ನಡೆಸಲಾಗುತ್ತಿದೆ ಎಂದು ದೂರಿದರು.
ಸಂಬಂಧಿತ ಮಾಹಿತಿ ಹುಡುಕಿ