ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸಚಿವ ರೇಣುಕಾಚಾರ್ಯ ಅವರನ್ನು ಸಂಪುಟದಿಂದ ಕೈ ಬಿಡುವ ಚಿಂತನೆ ನಡೆದಿದೆ ಎನ್ನಲಾಗಿದೆ.
ಸಿಎಂ ವಿರುದ್ಧ ಒತ್ತಡದ ತಂತ್ರಗಳನ್ನು ಅನುಸರಿಸಿ ಇತ್ತೀಚೆಗಷ್ಟೆ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ತಮ್ಮ ಪಕ್ಷದ ಶಾಸಕರ ಒತ್ತಡದಿಂದಲೇ ಅಧಿಕಾರ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದಾರೆ ಎನ್ನುವುದು ಪಕ್ಷದ ಮೂಲಗಲು ತಿಳಿಸಿವೆ.
ಅಬಕಾರಿ ಖಾತೆ ನೀಡಿದರೆ ರೇಣುಕಾ, ತಮಗೆ ವಸತಿ ಖಾತೆಯೇ ಬೇಕೆಂದು ಪಟ್ಟು ಹಿಡಿದು ಮತ್ತೊಮ್ಮೆ ಬಂಡಾಯ ಸಾರಿದರು. ಅವರಿಗೆ ಸಚಿವ ಸ್ಥಾನ ಕೊಟ್ಟಿದ್ದೆ ತಪ್ಪಾಯಿತು ಎಂದು ಪಕ್ಷದಲ್ಲಿ ಅಪಸ್ವರದ ಅಲೆ ಹೆಚ್ಚಾಗತೊಡಗಿದೆ. ಇದೀಗ ರೇಣುಕಾಚಾರ್ಯರನ್ನು ಮಂತ್ರಿ ಸ್ಥಾನದಿಂದ ಇಳಿಸಬೇಕೆಂದು ಎಲ್ಲೆಡೆಯಿಂದ ಬಿಜೆಪಿಗೆ ಒತ್ತಡ ಹೇರಲಾಗುತ್ತಿದ್ದು, ಪಕ್ಷದಲ್ಲಿ ಭಿನ್ನಮತ ಮತ್ತೊಮ್ಮೆ ಭುಗಿಲೆದ್ದಿದೆ.