ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರೈತರನ್ನು ನಾವು ಎತ್ತಿಕಟ್ಟಿಲ್ಲ, ರೊಚ್ಚಿಗೆದ್ದಿದ್ದಾರೆ: ದೇಶಪಾಂಡೆ (Yediyurappa | Karnataka CM | RV Deshpande | Farmers)
Bookmark and Share Feedback Print
 
ರೈತಸಂಘಗಳ ಹೆಸರಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕುತಂತ್ರ ರಾಜಕೀಯ ಮಾಡುತ್ತಿವೆ ಎಂಬ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ, ರೈತರನ್ನು ನಾವು ಎತ್ತಿ ಕಟ್ಟಿಲ್ಲ; ಅವರು ಸರಕಾರದ ವಿರುದ್ಧ ರೊಚ್ಚಿಗೆದ್ದಿದ್ದಾರೆ ಎಂದಿದ್ದಾರೆ.

ಬಿಜೆಪಿ ಸರಕಾರದ ವಿರುದ್ಧ ನಾವು ಕಾಂಗ್ರೆಸ್ಸಿನವರು ರೈತರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿಲ್ಲ. ರೈತರೇ ಸರಕಾರದ ರೈತವಿರೋಧಿ ನೀತಿಗಳ ವಿರುದ್ಧ ಸಿಡಿದು ನಿಂತಿದ್ದಾರೆ ಎಂದರು.
Deshpande
NRB


ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ಚುಕ್ಕಾಣಿ ಹಿಡಿದ ಸರಕಾರ ಈಗ ರೈತರ ಕೈಗೇ ಕೋಳ ತೊಡಿಸುವ ಕೆಲಸ ಮಾಡುತ್ತಿದೆ. ಅವರ ಸಮಸ್ಯೆಗಳಿಗೆ ಪೂರಕ ಸ್ಪಂದನೆ ನೀಡುತ್ತಿಲ್ಲ. ಇವೆಲ್ಲವನ್ನು ಎಷ್ಟು ದಿನ ರೈತರು ತಡೆದುಕೊಳ್ಳಬಹುದು? ಅದಕ್ಕಾಗಿ ಅವರು ಬೀದಿಗಿಳಿದು ಸರಕಾರದ ನೀತಿಗಳ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ದೇಶಪಾಂಡೆ ತಿಳಿಸಿದ್ದಾರೆ.

ರಾಜ್ಯದ ಹಲವೆಡೆ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಎಲ್ಲವೂ ರೈತರದ್ದಲ್ಲ. ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗಳು ಕುತಂತ್ರ ರಾಜಕಾರಣವಿದೆ. ಸರಕಾರದ ವಿರುದ್ಧ ಗೊಂದಲ ಸೃಷ್ಟಿಸುವ ಮೂಲಕ ಅಲ್ಲೋಲಕಲ್ಲೋಲವನ್ನು ನಿರೀಕ್ಷಿಸುವುದು ಅವರ ಉದ್ದೇಶ ಎಂದು ಮುಖ್ಯಮಂತ್ರಿಗಳು ಗುರುವಾರ ಪ್ರತಿಪಕ್ಷಗಳ ವಿರುದ್ಧ ಕಿಡಿ ಕಾರಿದ್ದರು.

ಅಲ್ಲದೆ ಇದೇ ರೀತಿಯಲ್ಲಿ ವಿರೋಧ ಪಕ್ಷಗಳು ತಮ್ಮ ವರ್ತನೆಯನ್ನು ಮುಂದುವರಿಸಿದರೆ ಕಾನೂನು ಕ್ರಮವನ್ನು ತೆಗೆದುಕೊಳ್ಳಲೂ ತನ್ನ ಸರಕಾರ ಹಿಂದೆ ಮುಂದೆ ನೋಡುವುದಿಲ್ಲ. ನಮ್ಮ ಸರಕಾರವು ರೈತರಿಗೆ ನೀಡಿದಷ್ಟು ಸಹಕಾರ ಈ ಹಿಂದಿನ ಯಾವ ಸರಕಾರವೂ ನೀಡಿಲ್ಲ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಅದನ್ನು ಶೀಘ್ರದಲ್ಲೇ ದಾಖಲೆಗಳ ಮೂಲಕ ಬಹಿರಂಗಪಡಿಸುವುದಾಗಿ ಯಡಿಯೂರಪ್ಪ ಹೇಳಿದ್ದರು.
ಸಂಬಂಧಿತ ಮಾಹಿತಿ ಹುಡುಕಿ