ಎಚ್1ಎನ್1 ಅಟ್ಟಹಾಸ ರಾಜ್ಯದಲ್ಲಿ ಇನ್ನೂ ಮುಂದುವರಿದಿದ್ದು, ಮತ್ತೆ ಐದು ಮಂದಿ ಎಚ್1ಎನ್1ಗೆ ಬಲಿಯಾಗುವ ಮೂಲಕ ಸಾವಿನ ಸಂಖ್ಯೆ ಒಟ್ಟು 137ಕ್ಕೆ ಏರಿರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹಂದಿಜ್ವರಕ್ಕೆ ಬಲಿಯಾದ ಐದು ಮಂದಿಯಲ್ಲಿ ನಾಲ್ವರು ಬೆಂಗಳೂರು ನಿವಾಸಿಗಳಾಗಿದ್ದು, ಮತ್ತೋರ್ವ ಮೈಸೂರಿನ ವ್ಯಕ್ತಿಯಾಗಿದ್ದಾರೆ. ಇವರೆಲ್ಲಾ ಕಳೆದ ತಿಂಗಳು ಮಾರಕ ಎಚ್1ಎನ್1 ಸೋಂಕಿನಿಂದ ಮೃತಪಟ್ಟಿದ್ದಾರೆ. ಪ್ರಸಕ್ತ ತಿಂಗಳಿನ ಸಾವು-ನೋವಿನ ಅಂಕಿ ಅಂಶವನ್ನು ಮುಂದಿನ ತಿಂಗಳು ನೀಡಲಾಗುವುದು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಎಚ್1ಎನ್1 ಸೋಂಕಿನಿಂದ ಮೃತಪಟ್ಟ ಐದು ಮಂದಿಯಲ್ಲಿ ಮೂವರು ಮಹಿಳೆಯರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾಗಳು ವಿವರಿಸಿದ್ದಾರೆ. ಹಂದಿಜ್ವರದ ಸೋಂಕು ತಡೆಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.