ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮೇಲ್ಮನೆ: ಉಗ್ರಪ್ಪ ಸ್ಥಾನಕ್ಕೆ ಮೋಟಮ್ಮ ನೇಮಕ (Ugrappa | Bangalore | Motamma | Congress | JDS)
Bookmark and Share Feedback Print
 
ಮಾಜಿ ಸಚಿವೆ ಮೋಟಮ್ಮ ಅವರು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕಿಯಾಗಿ ನೇಮಕಗೊಂಡಿರುವುದಾಗಿ ಕಾಂಗ್ರೆಸ್ ಮೂಲಗಳು ತಿಳಿಸಿವೆ.

ವಿಧಾನಪರಿಷತ್‌ನ ಸದಸ್ಯತ್ವದಿಂದ ವಿ.ಎಸ್.ಉಗ್ರಪ್ಪ ಅವರು ನಿವೃತ್ತರಾದ ನಂತರ ತೆರವಾದ ವಿರೋಧಪಕ್ಷದ ನಾಯಕನ ಸ್ಥಾನಕ್ಕೆ ಮೋಟಮ್ಮ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆ ಸ್ಥಾನಕ್ಕೆ ನೇಮಿಸಿದೆ.

ಮೋಟಮ್ಮ ಅವರು ಜನವರಿ 20ರವರೆಗೆ ವಿರೋಧ ಪಕ್ಷದ ನಾಯಕಿಯಾಗಿ ಕಾರ್ಯನಿರ್ವಹಿಸಲಿದ್ದು ಆನಂತರ ವಿರೋಧ ಪಕ್ಷದ ನಾಯಕನ ಸ್ಥಾನ ಜೆಡಿಎಸ್ ಪಾಲಾಗಲಿದೆ.

ಮೇಲ್ಮನೆಯಲ್ಲಿ ಜನವರಿ 20ರವರೆಗೆ ಕಾಂಗ್ರೆಸ್ ಸದಸ್ಯರ ಸಂಖ್ಯೆ 19ಇದ್ದು, ಆನಂತರ ಪ್ರಕಾಶ್ ರಾಥೋಡ್, ಚಂದ್ರಶೇಖರ್ ಕಂಬಾರ ಹಾಗೂ ಮಲ್ಲಾಜಮ್ಮ ಅವರ ನಿವೃತ್ತಿಯಿಂದ ಕಾಂಗ್ರೆಸ್ ಸದಸ್ಯರ ಸಂಖ್ಯೆ 16ಕ್ಕೆ ಕುಸಿಯಲಿದೆ.

ಜನವರಿ 20ರ ನಂತರ ಜೆಡಿಎಸ್ ಸದಸ್ಯರ ಸಂಖ್ಯೆ 17ಇದ್ದು, ಅದಕ್ಕಿಂತ ಒಂದು ಸ್ಥಾನ ಕಡಿಮೆ ಇರುವ(ಸಭಾಪತಿ ಹೊರತುಪಡಿಸಿ) ಕಾಂಗ್ರೆಸ್ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಕಳೆದುಕೊಳ್ಳಲಿದೆ. ಮೇಲ್ಮನೆಯಲ್ಲಿ ಹಾಲಿ ಜೆಡಿಎಸ್ ಪಕ್ಷದ ನಾಯಕರಾಗಿರುವ ಎಂ.ಸಿ.ನಾಣಯ್ಯ ಅವರು ಜನವರಿ 20ರ ನಂತರ ವಿರೋಧ ಪಕ್ಷದ ನಾಯಕರಾಗಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ