ಐತಿಹಾಸಿಕ ಬೀಡಾದ ಹಂಪಿಯಲ್ಲಿ ಸಚಿವ ಸಂಪುಟ ಸಭೆ ನಡೆಸಬೇಕೆಂಬ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಅವರ ಬೇಡಿಕೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಳ್ಳಿಹಾಕಿದ್ದಾರೆ.
ಕೃಷ್ಣದೇವರಾಯರ 500ನೇ ಪಟ್ಟಾಭಿಷೇಕ ಉತ್ಸವದ ನಿಮಿತ್ತ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಿದ್ಧತಾ ಸಭೆಯಲ್ಲಿ ರೆಡ್ಡಿ ಅವರು, ಹಂಪಿಯಲ್ಲಿ ಸಚಿವ ಸಂಪುಟ ಸಭೆ ನಡೆಸುವ ಪ್ರಸ್ತಾಪ ಮುಂದಿಟ್ಟರು. ಆದರೆ ಮುಖ್ಯಮಂತ್ರಿಗಳು ಅಂತಹ ಆಲೋಚನೆ ಇಲ್ಲ ಹೇಳುವ ಮೂಲಕ ಆಸೆಗೆ ತಣ್ಣೀರೆರಚಿದ್ದಾರೆ.
ಈ ಹಿಂದೆ ಸಚಿವ ರೆಡ್ಡಿ, ಯಡಿಯೂರಪ್ಪಗೆ ಹಂಪಿಯಲ್ಲಿ ಸಚಿವ ಸಂಪುಟ ಸಭೆ ನಡೆಸೋಣ ಎಂದು ಸಲಹೆ ನೀಡಿದ್ದರು. ಸಭೆಯ ಕಾರ್ಯಕ್ರಮ ಮುಗಿಯುವ ತನಕ ಅದರ ಬಗ್ಗೆ ಉಸಿರೆತ್ತದ ಮುಖ್ಯಮಂತ್ರಿಗಳು ಕೊನೆಯಲ್ಲಿ ಹಂಪಿಯಲ್ಲಿ ಸಚಿವ ಸಂಪುಟ ನಡೆಸುವ ಆಲೋಚನೆಗಳಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.