ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಶೀಘ್ರವೇ ನಗರಾಭಿವೃದ್ಧಿ ನೀತಿಗೆ ಅಂತಿಮ ರೂಪ: ಬಿಜೆಪಿ (BJP | Yeddyurappa | Suresh Kumar | Bangalore)
Bookmark and Share Feedback Print
 
ಫೆಬ್ರುವರಿಯಲ್ಲಿ 'ಕರ್ನಾಟಕ ನಗರಾಭಿವೃದ್ದಿ ನೀತಿ' ಅಂತಿಮ ರೂಪ ಪಡೆದು, ಸಂಪುಟದ ಮುಂದೆ ಅನುಮೋದನೆಗೆ ಬರಲಿದೆ ಎಂದು ನಗರಾಭಿವೃದ್ದಿ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ನಗರಾಭಿವೃದ್ದಿ ಇಲಾಖೆ, ಕರ್ನಾಟಕ ನಗರಾಭಿವೃದ್ದಿ ನೀತಿಯ ಕರಡು ಕುರಿತು ನಗರದಲ್ಲಿ ಆಯೋಜಿಸಿದ್ದ ಸಮಾಲೋಚನೆ ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ನಗರಾಭಿವೃದ್ದಿ ನೀತಿ ಕರಡನ್ನು ಒಂದೂವರೆ ತಿಂಗಳ ಹಿಂದೆಯೇ ಪ್ರಕಟಿಸಲಾಗಿದೆ ಎಂದರು.

ಜನವರಿ15ರೊಳಗೆ ನಗರಾಭಿವೃದ್ಧಿ ನೀತಿಯನ್ನು ಸಂಪುಟದ ಮುಂದೆ ಅನುಮೋದನೆಗೆ ಇಡಲು ನಿರ್ಧರಿಸಲಾಗಿತ್ತು. ಆದರೆ, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಂದ ವ್ಯಾಪಕ ಸಲಹೆ, ಸೂಚನೆಗಳು ಬರುತ್ತಿದ್ದು, ಫೆಬ್ರುವರಿ ಅಂತ್ಯದೊಳಗೆ ನೀತಿ ಸ್ಪಷ್ಟ ಸ್ವರೂಪ ಪಡೆದುಕೊಳ್ಳಲಿದೆ ಎಂದರು. ಪ್ರತಿಯೊಬ್ಬರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಪ್ರತಿ ಪ್ರಮುಖ ನಗರಗಳಲ್ಲಿ ಅಭಿಪ್ರಾಯ ಸಂಗ್ರಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ