ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳ ಪಕ್ಷಗಳು ಸವಕಲು ನಾಣ್ಯಗಳಂತಾಗಿವೆ ಎಂದು ಸಾರಿಗೆ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಬೆಂಗಳೂರು ಜಿಲ್ಲಾ ಗೃಹರಕ್ಷಕದಳ ವಿಧಾನಸೌಧದ ಮುಂಭಾಗ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಪತ್ತು ಕಡಿತಗೊಳಿಸುವ ದಿನಾಚರಣೆ ರಾಲಿ, ನಿಷ್ಕಾಮ ಸೇವೆಯ ರಕ್ಷಕ ಪಡೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಎರಡೂ ಪಕ್ಷಗಳು ದುರ್ಬಲಗೊಂಡಿರುವುದರಿಂದ ಚುನಾವಣೆ ಮೈತ್ರಿ ಮಾಡಿಕೊಳ್ಳುವುದು ಅವಶ್ಯಕವಾಗಿತ್ತು. ಕಾಂಗ್ರೆಸ್-ಜೆಡಿಎಸ್ ಮೈತ್ರಿಯೊಂದಿಗೆ ಬಿಬಿಎಂಪಿ ಚುನಾವಣಾ ಕಣಕ್ಕಿಳಿದರೂ ಸವಾಲು ಖಚಿತ ಎಂದರು.
ಸ್ವಸಾಮರ್ಥ್ಯದಿಂದ ಚುನಾವಣೆ ಎದುರಿಸಲಾಗದೆ, ಮೈತ್ರಿ ಮಾಡಿಕೊಳ್ಳುತ್ತಿವೆ ಎಂದು ಟೀಕಿಸಿದ ಅವರು, ಬಿಜೆಪಿ ಚುನಾವಣೆ ಎದುರಿಸಲು ಸಮರ್ಥವಾಗಿದ್ದು, ಈಗಾಗಲೇ ಕಾರ್ಯತಂತ್ರ ರೂಪಿಸಲಾಗಿದೆ ಎಂದು ಹೇಳಿದರು.