ಗೃಹ ಕಾರ್ಮಿಕರ ಹಿತರಕ್ಷಣೆಗೆ ಸರ್ಕಾರ ಕರ್ನಾಟಕ ಗೃಹ ಕಾರ್ಮಿಕ ಕಲ್ಯಾಣ ಮಂಡಳಿ ರಚಿಸಲಿದೆ ಎಂದು ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ತಿಳಿಸಿದ್ದಾರೆ.
ಕರ್ನಾಟಕ ಗೃಹ ಕಾರ್ಮಿಕರ ಚಳವಳಿ ನಗರದಲ್ಲಿ ಏರ್ಪಡಿಸಿದ್ದ ಗೃಹ ಕಾರ್ಮಿಕರ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಸಚಿವರು, ಗೃಹ ಕಾರ್ಮಿಕರ ಕನಿಷ್ಠ ವೇತನ ನಿಗದಿ ಅವೈಜ್ಞಾನಿಕವಾಗಿದೆ. ರಜಾ, ಭತ್ಯೆ, ಅಲಭ್ಯತೆ, ಮಾಲೀಕರ ಶೋಷಣೆ ಮತ್ತಿತರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಪ್ರತಿಯೊಂದು ಕೆಲಸಕ್ಕೂ ವಿವಿಧ ವೇತನ ನಿಗದಿಪಡಿಸುವುದು ಸೂಕ್ತ ಎಂದರು. ಈ ಕುರಿತು ಚರ್ಚೆ ಅವಶ್ಯ. ಕಾನೂನು ಜಾಗೃತಿ ಮೂಡಿಸಿದಲ್ಲಿ, ಶೋಷಣೆಗೆ ಒಳಗಾಗುವುದನ್ನು ತಪ್ಪಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.