ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯಾವನ್ರಿ ಸಿಎಂ ಬ್ಲಡಿ ಬಾಸ್ಟರ್ಡ್!: ದೇವೇಗೌಡ ಉವಾಚ (Deve gowda | Yeddyurappa | BJP | JDS | Congress)
Bookmark and Share Feedback Print
 
PTI
'ನೈಸ್ ವಿರುದ್ಧದ ನಿಜವಾದ ಯುದ್ಧ ಈಗಷ್ಟೇ ಆರಂಭವಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡು ಯಾವನ್ರಿ ಅವನು ಸಿಎಂ ಬ್ಲಡಿ ಬಾಸ್ಟರ್ಡ್, ಮಾನ ಮರ್ಯಾದೆ ಇದೆಯಾ ಅವನಿಗೆ. ದೇವೇಗೌಡನ್ನ ಏನೂ ಅಂತ ತಿಳಿದುಕೊಂಡಿದ್ದಾನೆ' ಎಂದು ಏಕವಚನದಲ್ಲಿ ಬೈದಿರುವ ವಿಷಯ ರಾಜಕೀಯ ವಲಯದಲ್ಲಿ ಬಹುದೊಡ್ಡ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ದೊಡ್ಡತೋಗೂರಿನಲ್ಲಿ ರೈತರನ್ನು ಉದ್ದೇಶಿಸಿ ದೇವೇಗೌಡರು ಮಾತನಾಡುತ್ತ, ಮುಖ್ಯಮಂತ್ರಿ ವಿರುದ್ಧ ಅಸಭ್ಯ ಶಬ್ದ ಪ್ರಯೋಗದೊಂದಿಗೆ ಆಕ್ರೋಶ ವ್ಯಕ್ತಪಡಿಸಿದ್ದರು. ನೈಸ್‌ಗಾಗಿ ರೈತರ ಭೂಮಿ ಕಬಳಿಸುತ್ತಿರುವ ವಿರುದ್ಧ ನಿಜವಾದ ಯುದ್ಧ ಈಗ ಆರಂಭವಾಗಿದೆ. ರೈತರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುವುದಾಗಿ ಘೋಷಿಸಿದರು.

ನಾ ಯಡಿಯೂರಪ್ಪಗೆ ಬೈದಿಲ್ಲ-ದೇವೇಗೌಡ: ನಾನು ಯಡಿಯೂರಪ್ಪನವರಿಗೆ ಕೆಟ್ಟ ಪದಗಳಿಂದ ಬೈದಿಲ್ಲ ಎಂದಿರುವ ದೇವೇಗೌಡರು, ರಾಜ್ಯದ ಪತ್ರಿಕೆಯೊಂದರಲ್ಲಿ ಪ್ರಕಟವಾದ ಕಾರ್ಟೂನ್ ಬರೆದಿರುವ ಬಗ್ಗೆ, ಆ ಪತ್ರಿಕೆಯ ಮಾಲೀಕ, ರಾಜ್ಯದ ಅಡ್ವೊಕೇಟ್ ಜನರಲ್ ಅಶೋಕ್ ಹಾರ್ನಳ್ಳಿಗೆ ಬೈದಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ನಾನು ಯಡಿಯೂರಪ್ಪನವರಿಗೆ ಬೈದಿದ್ದರೆ ಕ್ಷಮೆ ಕೇಳಬಹುದಿತ್ತು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

NRB
ದೇವೇಗೌಡರ ಹೇಳಿಕೆಯಿಂದ ನೋವಾಗಿದೆ-ಸಿಎಂ: ನನ್ನ ವಿರುದ್ಧ ಗೌಡರು ಬಳಸಿದ ಭಾಷೆಯಿಂದ ತುಂಬಾ ನೋವಾಗಿದೆ. ಆದರೆ ಅವರು ಬಳಸಿದ ಭಾಷೆಯನ್ನು ನಾನು ಬಳಸಲಾರೆ. ಅವರು ಪ್ರಧಾನಿ ಹುದ್ದೆಯನ್ನು ಅಲಂಕರಿಸಿದವರು. ತುಂಬಾ ಹತಾಶರಾಗಿ ಮಾತನಾಡಿದ್ದಾರೆ ಎಂದು ತಣ್ಣಗೆ ಪ್ರತಿಕ್ರಿಯೆ ನೀಡಿದವರು ಮುಖ್ಯಮಂತ್ರಿ ಯಡಿಯೂರಪ್ಪ.

ಹಿರಿಯರಾದ ಗೌಡರ ಬಗ್ಗೆ ಅಪಾರವಾದ ಗೌರವವಿದೆ. ಆದರೆ ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂಬ ಅರಿವು ಅವರಿಗೆ ಇರಬೇಕು ಎಂದು ಹೇಳಿದರು.

ಗೌಡರು ಬೇಷರತ್ ಕ್ಷಮೆ ಕೇಳ್ಬೇಕು-ಧನಂಜಯ್ ಕುಮಾರ್: ಮಾಜಿ ಪ್ರಧಾನಿಯಾಗಿ ಇಷ್ಟು ಅಸಭ್ಯ ಪದ ಬಳಸುವುದು ಅವರಿಗೆ ಶೋಭೆ ತರುವದಲ್ಲ. ಇದಕ್ಕಿಂತ ಕೀಳು ಮಟ್ಟದ ರಾಜಕೀಯ ಸಂಸ್ಕೃತಿ ಇನ್ನಿಲ್ಲ ಎಂದು ಪಕ್ಷದ ವಕ್ತಾರ ಧನಂಜಯ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇವೇಗೌಡರು ಬಳಸಿರುವ ಪದ ಅವರ ಪಕ್ಷದ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಮುಖ್ಯಮಂತ್ರಿಗಳ ವಿರುದ್ಧ ಕೆಟ್ಟ ಪದ ಬಳಕೆ ಮಾಡಿರುವ ದೇವೇಗೌಡರು ಬೇಷರತ್ ಆಗಿ ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಆ ರೀತಿ ಹೇಳಬಾರದು-ದತ್ತ: ಮುಖ್ಯಮಂತ್ರಿಗಳ ವಿರುದ್ಧ ದೇವೇಗೌಡರು ಯಾವ ಭಾಷೆ ಬಳಸಿದ್ದಾರೆ ಎಂದು ಗೊತ್ತಿಲ್ಲ, ಆದರೆ ಮಾಜಿ ಪ್ರಧಾನಿಗಳಾದ ಗೌಡರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಈವರೆಗೂ ಅಂತಹ ಕೆಟ್ಟ ಪದ ಬಳಕೆ ಮಾಡಿದವರಲ್ಲ, ಬಹುಶ ಆವೇಶಕ್ಕೊಳಗಾಗಿ ಅಂತಹ ಪದ ಬಳಸಿರಬಹುದೇನೋ. ಆದರೂ ಕೆಟ್ಟ ಪದ ಬಳಕೆ ಸರಿಯಲ್ಲ ಎಂದು ಜೆಡಿಎಸ್ ವಕ್ತಾರ ವೈಎಸ್‌ವಿ ದತ್ತ ಪ್ರತಿಕ್ರಿಯಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ