ನೈಸ್ ವಿವಾದದ ಆರೋಪ-ಪ್ರತ್ಯಾರೋಪಗಳ ನಡುವೆಯೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಾನುವಾರ ರಾತ್ರಿ ತ್ರಿ ಈಡಿಯಟ್ಸ್ ಸಿನಿಮಾ ವೀಕ್ಷಿಸಿದರು.
ಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಸತೀಶ್ ರೆಡ್ಡಿ, ಕೃಷ್ಣಪ್ಪ, ಮುನಿರಾಜು ಸೇರಿದಂತೆ ನಗರದ ಕೆಲವು ಶಾಸಕರೊಂದಿಗೆ ಸಿಎಂ ಪಿವಿಆರ್ ಚಿತ್ರಮಂದಿರದಲ್ಲಿ ತಡರಾತ್ರಿ ಚಿತ್ರ ವೀಕ್ಷಿಸಿದ್ದಾರೆ.
ಅಪರಾಹ್ನ ದಾಸರಹಳ್ಳಿಯ ಸಮಾರಂಭವೊಂದರಲ್ಲಿ ಭಾಗವಹಿಸಿದ ವೇಳೆ ಕೆಲವು ಶಾಸಕರು ಚಿತ್ರದ ಕುರಿತು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದಾಗ ಯಡಿಯೂರಪ್ಪ ಚಿತ್ರ ನೋಡುವ ಮನಸ್ಸು ಮಾಡಿದ್ದಾರೆನ್ನಲಾಗಿದೆ.