ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗೌಡರಿಗೆ ಮಂಪರು ಪರೀಕ್ಷೆ ಮಾಡಬೇಕು: ಮಸ್ಕಿ (Deve gowda | Manohar maski | BJP | JDS)
Bookmark and Share Feedback Print
 
ನೈಸ್ ರಸ್ತೆ ಅಕ್ಕಪಕ್ಕದಲ್ಲಿ ದೇವೇಗೌಡರು ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ಆರೋಪ ಜಗಜ್ಜಾಹೀರು ಆಗುತ್ತಿದ್ದಂತೆ ತಲೆಕೆಡಿಸಿಕೊಂಡು ವಿವೇಚನಾ ರಹಿತ ಹೇಳಿಕೆಗಳನ್ನು ನೀಡುತ್ತಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಮನೋಹರ ಮಸ್ಕಿ ಒತ್ತಾಯಿಸಿದ್ದಾರೆ.

ನೈಸ್ ಕಾರಿಡಾರ್ ವ್ಯಾಪ್ತಿಯಲ್ಲಿ ತಮ್ಮ ಜಮೀನು ಇದೆ ಎಂಬ ಆರೋಪಕ್ಕೆ ಪ್ರತಿಯಾಗಿ ದೇವೇಗೌಡರು ಸಿಬಿಐ ತನಿಖೆಯಾಗಲಿ ಎಂದು ಬಹಿರಂಗವಾಗಿ ಹೇಳುತ್ತಿದ್ದರೂ ವಾಸ್ತವವಾಗಿ ಕಂಗಾಲಾಗಿದ್ದಾರೆ. ಈ ಗೊಂದಲದಿಂದಲೇ ಅವರು ಅವಾಚ್ಯ ಭಾಷೆಗಳನ್ನು ಬಳಸಿ ಕಿಡಿಕಾರುತ್ತಿದ್ದಾರೆ. ಅವರನ್ನು ಮಂಪರು ಪರೀಕ್ಷೇಗೆ ಒಳಪಡಿಸಿದರೆ ನಿಜಾಂಶ ತಿಳಿಯುತ್ತದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಸಭ್ಯ ಪದ ಬಳಕೆಯಿಂದ ಗೌಡರು, ಸಿಎಂ ಮಾತ್ರವಲ್ಲದೇ ರಾಜ್ಯದ ಜನ ಮತ್ತು ಸಂಸ್ಕೃತಿಗೆ ಅವಮಾನ ಮಾಡಿದ್ದಾರೆ. ಇಂತಹ ಕೀಳುಮಟ್ಟದ ಸಂಸ್ಕೃತಿ ಜೆಡಿಎಸ್ ಪಕ್ಷದಲ್ಲಿಯೇ ಬೆಳೆದು ಬಂದಿದೆ. ನೈಸ್ ವಿವಾದ ದಾರಿ ತಪ್ಪಿಸುವ ಹುನ್ನಾರ ಎಂದು ಮಸ್ಕಿ ಆರೋಪಿಸಿದರು.
ಸಂಬಂಧಿತ ಮಾಹಿತಿ ಹುಡುಕಿ