ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬೆದರಿಕೆ ಕರೆ: ಇನ್ಫೋಸಿಸ್ ಉದ್ಯೋಗಿ ವಜಾ (Mysore | Bangalore | Karnataka | Infosys)
Bookmark and Share Feedback Print
 
ಬೆಂಗಳೂರಿಗೆ ತೆರಳುವ ವಿಮಾನವನ್ನು ವಿಳಂಬಗೊಳಿಸಲು ವಿಮಾನದಲ್ಲಿ ಬಾಂಬ್ ಇದೆ ಎಂದು ಹುಸಿ ಬೆದರಿಕೆ ಕರೆ ಮಾಡಿದ್ದ ಇನ್ಫೋಸಿಸ್ ಟೆಕ್ನಾಲಜೀಸ್ ಸಂಸ್ಥೆಯ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬನನ್ನು ಸಂಸ್ಥೆ ಕೆಲಸದಿಂದ ವಜಾ ಮಾಡಿದೆ.

ವಿಮಾನ ಹತ್ತುವುದಕ್ಕೆ ವಿಳಂಬವಾದ ಕಾರಣ ಅಭಿಷೇಕ್ ಗುಪ್ತ ಎಂಬುವನು ಕಳೆದ ಅ.25ರಂದು ಗೋ-ಏರ್ ಬಜೆಟ್ ಕ್ಲಾರಿಯರ್ ವಿಮಾನಕ್ಕೆ ಬಾಂಬ್ ಬೆದರಿಕೆ ಹಾಕಿದ್ದ.

ಕಳೆದ ನಾಲ್ಕು ತಿಂಗಳಲ್ಲಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿದ್ದರೆನ್ನಲಾದ ಪಲ್ಲವ್ ಚಕ್ರವರ್ತಿ ಮತ್ತು ಕೃಷ್ಣಮೂರ್ತಿ ಎಂಬುವರನ್ನು ಪೊಲೀಸರು ಬಂಧಿಸಿದ ನಂತರ ಸಂಸ್ಥೆ ಅವರನ್ನು ಅಮಾನತುಗೊಳಿಸಿದೆ.

ನಾವು ಶಿಸ್ತು ಮತ್ತು ನಿಯಮಗಳಿಗೆ ತುಂಬಾ ಬೆಲೆ ಕೊಡುತ್ತೇವೆ. ಅಕ್ರಮ ನಡವಳಿಕೆ ಸಹಿಸುವುದಿಲ್ಲ. ಈ ಕಾರಣದಿಂಲೇ ಗುಪ್ತಾನನ್ನು ವಜಾ ಮಾಡಿದ್ದೇವೆ ಎಂದು ಎಚ್‌ಆರ್‌ಡಿ, ಶಿಕ್ಷಣ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಮೋಹನ್ ದಾಸ್ ಪೈ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ