ಕೇವಲ ಅಪರಾಧ ಸುದ್ದಿಗಳಿಗಾಗಿ ಪೊಲೀಸರ ಮಾಲೀಕತ್ವದ ನೂತನ ಟಿ.ವಿ ಚಾನೆಲ್ ಮತ್ತು ಎಫ್.ಎಂ ರೇಡಿಯೋ ಶೀಘ್ರದಲ್ಲಿಯೇ ಆರಂಭವಾಗಲಿದೆ.
ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಏಪ್ರಿಲ್‌ನಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಇವುಗಳಿಗೆ ನಗರ ಪೊಲೀಸರೇ ಮಾಲೀಕರು. ಇದು ಸಾಧ್ಯವಾದರೆ, 24 ಗಂಟೆಗಳ ಅಪರಾಧ ಸುದ್ದಿ ಪ್ರಸಾರ ಮಾಡುವಲ್ಲಿ ವಿಶ್ವದಲ್ಲಿಯೇ ಕರ್ನಾಟಕಕ್ಕೆ ಪ್ರಥಮ ಸ್ಥಾನ ಸಿಗಲಿದೆ.
ಪೊಲೀಸ್ ಆಯುಕ್ತ ಶಂಕರ ಬಿದರಿ ಈ ಯೋಜನೆಯ ಸೃಷ್ಟಿಕರ್ತ. ಪೊಲೀಸರೇ ವರದಿಗಾರರು ಹಾಗೂ ಸಂಪಾದಕರಾಗಲಿರುವ ಈ ವಾಹಿನಿಯಲ್ಲಿ ಸರ ಅಪಹರಣ, ಕೊಲೆ, ಸುಲಿಗೆ, ಸಂಚಾರ ದಟ್ಟಣೆ ಸುದ್ದಿ ಹಾಗೂ ಕಾಣೆಯಾದವರ ಮತ್ತು ಅಪಘಾತಗಳ ಕುರಿತು ರಾಷ್ಟ್ರಾದ್ಯಂತ ಮಾಹಿತಿ ತಲುಪಿದಂತಾಗುತ್ತದೆ ಎಂದು ಬಿದರಿ ಸುದ್ದಿಗಾರರಿಗೆ ತಿಳಿಸಿದರು.