ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ಪ್ರವಾಸಿಗರ ರಕ್ಷಣೆ ಹಾಗೂ ಭದ್ರತೆಗೆ ಹೆಚ್ಚು ಗಮನ ನೀಡುವ ಅಗತ್ಯ ಇದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವೆ ಕುಮಾರಿ ಶೆಲ್ಜಾ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಪ್ರವಾಸಿಗರ ರಕ್ಷಣೆ ಹಾಗೂ ಭದ್ರತೆಯ ಬಗ್ಗೆ ವಿಶ್ವದ ಎಲ್ಲೆಡೆ ಗಮನಹರಿಸಲಾಗುತ್ತಿದೆ. ಇದು ಗಂಭೀರದ ವಿಚಾರವಾಗಿದ್ದು, ಪ್ರವಾಸಿಗರ ರಕ್ಷಣೆ ಬಗ್ಗೆ ತಕ್ಷಣ ಗಮನ ನೀಡುವ ಅಗತ್ಯವಿದೆ ಎಂದರು.
ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾತನಾಡಿದ ಅವರು, ಪ್ರವಾಸಿಗರ ರಕ್ಷಣೆಯ ನಿಟ್ಟಿನಲ್ಲಿ ಪ್ರವಾಸಿ ತಾಣಗಳಲ್ಲಿ ಹೆಚ್ಚು ಪೊಲೀಸರನ್ನು ನಿಯೋಜಿಸಬೇಕು, ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಒಂದು ವರ್ಷದ ವೀಸಾವನ್ನು ವಿದೇಶಿಯರಿಗೆ ನೀಡಲು ತೀರ್ಮಾನಿಸಲಾಗಿದೆ. ಇದು ಸದ್ಯದಲ್ಲೆ ಜಾರಿಗೆ ಬರಲಿದೆ ಎಂದು ಅವರು ಹೇಳಿದರು