ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಪ್ಪ-ಮಕ್ಕಳ ಉಸಾಬರಿ ಬಿಜೆಪಿಗೆ ಬೇಡ: ಸಿಎಂ (BJP | Yeddyurappa | Deve gowda | Kumaraswamy | Congress)
Bookmark and Share Feedback Print
 
ಮಾಜಿ ಪ್ರಧಾನಿ ಎಚ್ಯ.ಡಿ.ದೇವೇಗೌಡ ಮತ್ತು ಅವರ ಪುತ್ರ ಕುಮಾರಸ್ವಾಮಿ ಉಸಾಬರಿ ಬಿಜೆಪಿಯವರಿಗೆ ಬೇಡ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ವಕ್ತಾರ ವಿ.ಧನಂಜಯ್ ಕುಮಾರ್ ಅವರಿಗೆ ಸಲಹೆ ನೀಡಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭೂ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಧನಂಜಯಕುಮಾರ್ ಆರೋಪ ಬಿಜೆಪಿಯದ್ದೇ ಎಂದು ವರದಿಗಾರರು ಪ್ರಶ್ನಿಸಿದಾಗ ಈ ರೀತಿ ಉತ್ತರಿಸಿದರು.

ಧನಂಜಯ್ ಅವರು ಸೂಕ್ತ ಆಧಾರವಿಟ್ಟುಕೊಂಡೇ ಹೇಳಿದ್ದಿರಬಹುದು ಆದರೆ, ಅಪ್ಪ ಮಕ್ಕಳು ಏನಾದರೂ ಮಾಡಿಕೊಳ್ಳಲಿ. ಅವರ ಉಸಾಬರಿ ಬೇಡ ಎಂದ ಮುಖ್ಯಮಂತ್ರಿಗಳು, ಪ್ರಜಾತಂತ್ರ ವ್ಯವಸ್ಥೆ, ರಾಜಕಾರಣಿಗಳ ಬಗ್ಗೆ ಸಂದೇಹವಾಗಿ ಕಾಣುತ್ತಿರುವ ಈ ದಿನಗಳಲ್ಲಿ ಬಿಜೆಪಿಯವರು ಸತ್ಯ ನುಡಿದರೂ, ಅವರನ್ನು ತಪ್ಪಾಗಿ ಅರ್ಥೈಸಿಕಳ್ಳಲಾಗುತ್ತಿದೆ. ಗಾಜಿನ ಮನೆಯಲ್ಲಿದ್ದವರು ಅನ್ಯರ ಮನೆಗೆ ಕಲ್ಲು ಹೊಡೆಯಬಾರದು ಎಂದರು.

ಉಡುಪಿ ಕೃಷ್ಣಮಠ ಪರ್ಯಾಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಸಿಎಂ ಈ ಪ್ರತಿಕ್ರಿಯೆ ನೀಡಿದ್ದಾರೆ. ಸಚಿವ ಡಾ.ವಿ.ಎಸ್.ಆಚಾರ್ಯ, ಶಾಸಕರಾದ ರಘುಪತಿ ಭಟ್ ಮತ್ತು ಬಾಲಾಜಿ ಮೆಂಡನ್ ಜೊತೆಗಿದ್ದರು.
ಸಂಬಂಧಿತ ಮಾಹಿತಿ ಹುಡುಕಿ