ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಉಡುಪಿಯಲ್ಲಿ ಜನಮನಸೂರೆಗೊಂಡ 'ಪರ್ಯಾಯ' (Paryaaya | Sri Krishna | Udupi | Sri Puthige Matha | Shirur)
Bookmark and Share Feedback Print
 
ಸೋಮವಾರ ಬೆಳಿಗ್ಗೆ ಕುಂಭ ಲಗ್ನದಲ್ಲಿ ಪುತ್ತಿಗೆ ಶ್ರೀಗಳು ಅಕ್ಷಯಪಾತ್ರೆ ಮತ್ತು ಸಟ್ಟುಗ ನೀಡುವ ಮೂಲಕ ಶಿರೂರು ಶ್ರೀಗಳಿಗೆ ಪರ್ಯಾಯದ ಅಧಿಕಾರವನ್ನು ಹಸ್ತಾಂತರಿಸಿದರು. ಎರಡು ವರ್ಷಗಳ ಅವಧಿಗೆ ಶ್ರೀಕೃಷ್ಣನ ಪೂಜೆಯ ಕೈಂಕರ್ಯಗಳನ್ನು ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ವಹಿಸಿಕೊಳ್ಳುವ ಮೂಲಕ ಸತತ ಮೂರನೇ ಬಾರಿಗೆ ಪರ್ಯಾಯ ಪೂಜಾ ಕೈಂಕರ್ಯ ಜವಾಬ್ದಾರಿ ವಹಿಸಿಕೊಂಡ ಕೀರ್ತಿಗೆ ಪಾತ್ರರಾದರು.

ಪರ್ಯಾಯ ಮಠದ ಉದ್ಧಾರಕ್ಕೆ ತಾವು ನಿರಂತರವಾಗಿ ಶ್ರಮಿಸುವುದಾಗಿ ಶಿರೂರುಶ್ರೀಗಳು ಅಧಿಕಾರ ಸ್ವೀಕರಿಸಿದ ನಂತರ ಮಾತನಾಡುತ್ತ ತಿಳಿಸಿದರು.

ಇಂದು ಬೆಳಗಿನ ಜಾವ ಜೋಡುಕಟ್ಟೆಯಿಂದ ಆರಂಭಗೊಂಡ ಪರ್ಯಾಯ ಮರವಣಿಗೆಯು ಕೊಂಬು-ಕಹಳೆ. ಹುಲಿ ವೇಷ, ಕಂಗೀಲು, ಕುಡುಬಿ ನೃತ್ಯ ಇತ್ಯಾದಿಗಳೊಂದಿಗೆ ವೈಭವದಿಂದ ರಥಬೀದಿಗೆ ಸಾಗಿ ಬಂದಿದ್ದು, ಬೆಳಿಗ್ಗೆ 8.30ಕ್ಕೆ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್ ಸಡಗರದಿಂದ ಜರುಗಿತು. ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಜನಸ್ತೋಮ 2ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯ ಮಹೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾದರು.

ಮೆರವಣಿಗೆಯಲ್ಲಿ ಅಪ್ಸರೆಯರ ನೃತ್ಯ, ಕಾಮಧೇನು, ಕಾಳಿಂಗ ಮರ್ಧನ, ವಿಶ್ವರೂಪ ದರ್ಶನ, ಉಗ್ರನರಸಿಂಹ ಮುಂತಾದ ವೇಷ ಭೂಷಣಗಳು ಸಮಾರಂಭದಲ್ಲಿ ಮೇಳೈಸಿದವು.ಮೆರವಣಿಗೆಯಲ್ಲಿ ಶೀರೂರು ಶ್ರೀಗಳು, ಮುಖ್ಯಮಂತ್ರಿ ಯಡಿಯೂರಪ್ಪ ಪಾಲ್ಗೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ