ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವಿಧಾನಪರಿಷತ್‌ಗೆ ನಟ ಜಗ್ಗೇಶ್ ನೇಮಕ? (Vidhana parishath | Jaggesh | Bangalore | Karnataka)
Bookmark and Share Feedback Print
 
ವಿಧಾನ ಪರಿಷತ್‌ನ ಮೂವರು ನಾಮ ನಿರ್ದೇಶಿತ ಸದಸ್ಯರ ನೇಮಕ ಪ್ರಕ್ರಿಯೆ ಬಿಜೆಪಿಯಲ್ಲಿ ಬಿರುಸುಗೊಂಡಿದ್ದು, ಇದೀಗ ಮಾಜಿ ಶಾಸಕ ಜಗ್ಗೇಶ್ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ.

ಈಗಾಗಲೇ ಮೂರು ಸ್ಥಾನಗಳಿಗೆ ನಟಿ ತಾರಾ, ಮಾಜಿ ಸಚಿವ ವಿ.ಸೋಮಣ್ಣ ಮತ್ತು ಸಂಘ ಪರಿವಾರದ ಮುಖಂಡ ಕೃಷ್ಣಭಟ್ ಅವರ ಹೆಸರನ್ನು ಬಿಜೆಪಿ ಅಂತಿಮಗೊಳಿಸಿತ್ತಾದರೂ ಜಗ್ಗೇಶ್ ನೇಮಕಕ್ಕೆ ಕೆಲ ಹಿರಿಯ ಸಚಿವರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಶೋಭಾ ಕರಂದ್ಲಾಜೆ ಅವರನ್ನು ಸಂಪುಟದಿಂದ ಕೈ ಬಿಟ್ಟ ನಂತರ ಪಕ್ಷದಲ್ಲಿ ಒಕ್ಕಲಿಗ ಸಮುದಾಯದ ಪ್ರಾತಿನಿಧ್ಯ ಕಡಿಮೆಯಾಗಿದ್ದು, ಜಗ್ಗೇಶ್ ಅವರನ್ನು ನೇಮಕ ಮಾಡಿಕೊಳ್ಳುವ ಮೂಲಕ ಇದನ್ನು ನಿವಾರಣೆ ಮಾಡುವಂತೆ ಈ ಸಚಿವರು ವರಿಷ್ಠರಿಗೆ ಒತ್ತಡ ತಂದಿದ್ದಾರೆ. ಆ ನಿಟ್ಟಿನಲ್ಲಿ ಜಗ್ಗೇಶ್ ವಿಧಾನಪರಿಷತ್‌ಗೆ ನೇಮಕವಾಗುವ ಸಾಧ್ಯತೆ ಹೆಚ್ಚಳವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ