ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ದೇವೇಗೌಡರನ್ನು ಕಂಡ್ರೆ ದೇವರೇ ಪರಾರಿ: ಅಶೋಕ್ ವ್ಯಂಗ್ಯ (Deve gowda | Ashok | BJP | Yeddyurappa | Kumaraswamy)
Bookmark and Share Feedback Print
 
NRB
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಾತು, ಪ್ರಮಾಣಕ್ಕೆ ಬೆಲೆ ಎಲ್ಲಿದೆ ಎಂದು ಪ್ರಶ್ನಿಸಿರುವ ಸಾರಿಗೆ ಸಚಿವ ಆರ್.ಅಶೋಕ್, ದೇವೇಗೌಡರನ್ನು ಕಂಡರೆ ದೇವರೇ ಪರಾರಿಯಾಗ್ತಾನೆ ಎಂದು ವ್ಯಂಗ್ಯವಾಡಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೈಸ್ ತನ್ನ ಕೂಸು ಎಂದು ಸ್ವತಃ ಗೌಡರೇ ಒಪ್ಪಿಕೊಂಡಿದ್ದಾರೆ. ಆದರೆ ಆ ಕೂಸನ್ನು ಸರಿಯಾಗಿ ಬೆಳೆಸಿಲ್ಲ ಎಂಬುದನ್ನು ಗೌಡರು ತಿಳಿದುಕೊಳ್ಳಬೇಕಾಗಿದೆ ಎಂದರು. ಈಗ ಅಪ್ಪ-ಮಕ್ಕಳು ದೇವರ ಹೆಸರಲ್ಲಿ ಪ್ರಮಾಣದ ಮಾತನಾಡುತ್ತಿದ್ದಾರೆ. ಇವರ ಯಾವುದೇ ಮಾತು, ಪ್ರಮಾಣಕ್ಕೆ ನೈತಿಕತೆ ಇದೆಯೇ ಎಂದು ಕಿಡಿಕಾರಿದರು.

ಈ ಹಿಂದೆ ಆಣೆ-ಪ್ರಮಾಣ ಮಾಡಿ ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟದ 20ಟ್ವೆಂಟಿ ಮ್ಯಾಚ್ ಆಡಲಾಯಿತು. ಆದರೆ ತೆರೆಮರೆಯಲ್ಲಿದ್ದ ಗೌಡರ ರಾಜಕೀಯ ಚದುರಂಗದಾಟದಲ್ಲಿ, ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ಜೆಡಿಎಸ್ ಬ್ಯಾಟಿಂಗ್ ಮಾಡಿ ಎದ್ದು ಹೋಯಿತು. ಇವರ ಆಣೆ-ಪ್ರಮಾಣಕ್ಕೆ ಬೆಲೆ ಇದೆಯಾ ಎಂದು ಪ್ರಶ್ನಿಸಿದರು.

ನೈಸ್ ಕಂಪನಿಗೆ ಮೈಸೂರು-ಬೆಂಗಳೂರು ನಡುವೆ ರಸ್ತೆ ನಿರ್ಮಾಣ ಮಾಡಲು ಮಾಜಿ ಪ್ರಧಾನಿ ದೇವೇಗೌಡ, ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್.ಪಟೇಲ್ ನೇತೃತ್ವದ ಸರ್ಕಾರಗಳು ಎಷ್ಟೆಷ್ಟು ಭೂಮಿ ನೀಡಿವೆ ಎಂಬುದರ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಕೇವಲ ರಸ್ತೆ ನಿರ್ಮಾಣಕ್ಕೆ 2ಸಾವಿರ ಎಕರೆ ಜಮೀನು ಸಾಕಿತ್ತು. ಆದರೆ ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗಲೇ 21ಸಾವಿರ ಎಕರೆ ಭೂಮಿ ನೀಡಲಾಯಿತು. ಹೀಗೆ ಗೌಡರು ಬೇವಿನಮರ ಹಾಕಿ ಅಂಜುರದ ಹಣ್ಣು ಕೇಳುವುದು ಸರಿಯಲ್ಲ ಎಂದು ಅಶೋಕ್ ತಿರುಗೇಟು ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ