ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಾಗಲಕೋಟೆ: ಮೂರ್ತಿ ಭಗ್ನ-ಗುಳೇದಗುಡ್ಡ ಉದ್ವಿಗ್ನ (Bagalakote | Karnataka | Temple | Clash)
Bookmark and Share Feedback Print
 
ಕಿಡಿಗೇಡಿಗಳು ಗಣಪತಿ ದೇವಾಲಯದ ಮೂರ್ತಿ ಭಗ್ನಗೊಳಿಸಿದ ಪರಿಣಾಮ ಇಲ್ಲಿನ ಗುಳೇದಗುಡ್ಡ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದ್ದು, ಜನರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ದುಷ್ಕರ್ಮಿಗಳು ಮಂಗಳವಾರ ನಸುಕಿನಲ್ಲಿ ದುಷ್ಕೃತ್ಯ ಎಸಗಿದ್ದು, ಇದನ್ನು ಪ್ರತಿಭಟಿಸಿ ಬಸ್ ನಿಲ್ದಾಣ, ಪುರಸಭೆ ರಸ್ತೆ ಮಧ್ಯದಲ್ಲಿ ಟಯರುಗಳಿಗೆ ಬೆಂಕಿ ಇಟ್ಟು ಜನರು ಆಕ್ರೋಶ ವ್ಯಕ್ತಪಡಿಸಿದರು. ಇದರ ಪರಿಣಾಮ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಯಾಯಿತು. ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ಘಟನೆ: ಗಣಪತಿ ದೇವಾಲಯದ ಈಶ್ವರ ಮೂರ್ತಿ ಹಾಗೂ ಗಣೇಶ ವಿಗ್ರಹದ ಮುಂದಿದ್ದ ಮೂಷಿಕ ಮೂರ್ತಿಯನ್ನು ದುಷ್ಕರ್ಮಿಗಳು ಭಗ್ನಗೊಳಿಸಿ ದೇವಾಲಯದ ಎದುರಿನ ರಸ್ತೆಗೆ ಎಸೆದಿದ್ದರು. ಅಲ್ಲದೆ, ಗೋಪುರದಲ್ಲಿ ಅಳವಡಿಸಲಾಗಿದ್ದ 4 ಈಶ್ವರ ಮೂರ್ತಿಗಳಲ್ಲಿ ಒಂದನ್ನು ಹೊತ್ತೊಯ್ದು ಮಸೀದಿಯೊಂದರಲ್ಲಿ ಇಡಲಾಗಿತ್ತು. ಈ ಸಂಗತಿ ತಿಳಿದ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಸಂಬಂಧಿತ ಮಾಹಿತಿ ಹುಡುಕಿ