ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮೇಲ್ಮನೆ ಸದಸ್ಯರ ರಾಜೀನಾಮೆ-ಪೂರ್ವ ಯೋಜಿತ ಸಂಚು: ದತ್ತ (BJP | JDS | Congress | Yeddyurappa | Deve gowda)
Bookmark and Share Feedback Print
 
NRB
ಮೇಲ್ಮನೆಯಲ್ಲಿ ಜೆಡಿಎಸ್‌ಗೆ ವಿರೋಧ ಪಕ್ಷದ ನಾಯಕನ ಸ್ಥಾನ ತಪ್ಪಿಸಲೆಂದೇ ಬಿಜೆಪಿ ನಾಯಕರು ಬಿ.ಆರ್.ಗುರುದೇವ್ ಮತ್ತು ಎನ್.ತಿಪ್ಪಣ್ಣ ಅವರಿಂದ ರಾಜೀನಾಮೆ ಕೊಡಿಸಿದ್ದಾರೆಂದು ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತ ಪ್ರತಿಕ್ರಿಯಿಸಿದ್ದಾರೆ.

ಮೇಲ್ಮನೆಯಲ್ಲಿ ಜೆಡಿಎಸ್ ಸದಸ್ಯರ ಬಲವನ್ನು ಕುಗ್ಗಿಸುವ ಹುನ್ನಾರ ಇದಾಗಿದೆ ಎಂದು ದೂರಿರುವ ಅವರು, ವಿಧಾನಪರಿಷತ್‌ನಲ್ಲೂ ಆಪರೇಶನ್ ಕಮಲವನ್ನು ಮುಂದುವರಿಸಿದ್ದಾರೆ ಎಂದರು.

ಬಿಜೆಪಿ ನಾಯಕರಿಗೆ ಕಾಂಗ್ರೆಸ್‌ಗಿಂತ ಜೆಡಿಎಸ್‌ ಬಗ್ಗೆ ಹೆಚ್ಚು ಹೆದರಿಕೆ ಇದೆ ಎಂಬುದು ಇದರಿಂದ ಸಾಬೀತಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.

ಜೆಡಿಎಸ್‌ನಿಂದ ಮಾನಸಿಕವಾಗಿ ದೂರವಾಗಿ ಬಿಜೆಪಿ ಜತೆ ಗುರುತಿಸಿಕೊಂಡಿದ್ದ ಗುರುದೇವ್ ಮತ್ತು ಹಿರಿಯ ಸದಸ್ಯ ತಿಪ್ಪಣ್ಣ ಅವರು ಗುರುವಾರ ದಿಢೀರನೆ ಮೇಲ್ಮನೆ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಮೂಲಕ ಮೇಲ್ಮನೆಯಲ್ಲಿ ಜೆಡಿಎಸ್ 17ಸಂಖ್ಯಾಬಲ ಹೊಂದಿದ್ದು, ಇದೀಗ 15ಕ್ಕೆ ಇಳಿದಂತಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ