ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕನ್ನಡ ಬಳಸದಿದ್ರೆ ಎಚ್ಚರ: ಅಧಿಕಾರಿಗಳಿಗೆ ಸಿಎಂ (BJP | Yeddyurappa | Bangalore | Karnataka)
Bookmark and Share Feedback Print
 
ಆಡಳಿತದಲ್ಲಿ ಕನ್ನಡ ಬಳಸದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದೆಂದು ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಅಧಿಕಾರಿ ನೌಕರರಿಗೆ ಆಡಳಿತ ಕನ್ನಡ ಕಾರ್ಯ ಶಿಬಿರವನ್ನು ವಿಧಾನಸೌಧದಲ್ಲಿ ಗುರುವಾರ ವೀಡಿಯೋ ಸಂವಾದದ ಮೂಲಕ ಏಕಕಾಲಕ್ಕೆ ಎಲ್ಲ ಜಿಲ್ಲೆಗಳಲ್ಲೂ ಉದ್ಘಾಟಿಸಿ ಮಾತನಾಡಿದ ಅವರು, ಆಡಳಿತದಲ್ಲಿ ಕನ್ನಡ ಭಾಷೆಯನ್ನು ಬಳಸದಿದ್ದ ಪ್ರಕರಣದಲ್ಲಿ ಇದುವರೆಗೂ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳುತ್ತಿರಲಿಲ್ಲ. ಇನ್ನು ಮುಂದೆ ಇಂತಹ ರಿಯಾಯಿತಿ ಅಥವಾ ಔದಾರ್ಯಕ್ಕೆ ಅವಕಾಶ ಇಲ್ಲ. ಕನ್ನಡ ಬಳಸದ ಯಾವುದೇ ಶ್ರೇಣಿಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಆಡಳಿತದಲ್ಲಿ ಕನ್ನಡ ಬಳಸಲು ವಿಫಲರಾಗುವ ಅಧಿಕಾರಿಗಳ ವಾರ್ಷಿಕ ಅನುಷ್ಠಾನ ವರದಿಯಲ್ಲೂ ಈ ಬಗ್ಗೆ ನಮೂದಿಸುವುದಾಗಿ ಅವರು ಹೇಳಿದರು.

ಆಡಳಿತದಲ್ಲಿ ಇದುವರೆಗೂ ಕನ್ನಡ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗದಿರುವುದು ಬೇಸರದ ಹಾಗೂ ನೋವಿನ ಸಂಗತಿ. ಇದಕ್ಕೆ ಇಚ್ಛಾಶಕ್ತಿಯ ಕೊರತೆ, ತಾತ್ಸಾರ ಮನೋಭಾವ, ಉದಾಸೀನತೆಯೇ ಕಾರಣ ಎಂದು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ